ಸ್ಮಶಾನ ಮೌನದಂತಾದ ಕೇರಳ: ಸ್ವಚ್ಛತಾ ಕಾರ್ಯ ಶುರು
ನಿರಂತರ ಮಳೆಗೆ ತತ್ತರಿಸಿ ಸಾವಿರಾರು ಕೋಟಿ ರೂ.ಗಳ ನಷ್ಟ ಹಾಗೂ ಜೀವ ಹಾನಿಗೆ ಕಾರಣವಾಗಿರುವ ನೆಲ ಈಗ ಸ್ಮಶಾನ ಮೌನಕ್ಕೆ ಜಾರಿದೆ. ದೇವರ ನಾಡಿನಲ್ಲಿ ಸ್ವಚ್ಛತೆಯ ಕೆಲಸ ಈಗ ಶುರುವಾಗಿದೆ.
ಭಾರಿ ಮಳೆಗೆ ನಲುಗಿರುವ ಕೇರಳದಲ್ಲಿ ಈಗ ಸ್ಮಶಾನ ಮೌನ ಆವರಿಸಿದಂತಾಗಿದೆ. ಪರಿಹಾರ ಕಾರ್ಯಗಳು ಅಂತಿಮ ಹಂತಕ್ಕೆ ತಲುಪಿವೆ. ಮನೆಗಳ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಕೆಲಸ ಈಗ ಸವಾಲಿನ ಕೆಲಸದಂತಾಗಿದೆ. ಹೀಗಾಗಿ ಅಲ್ಲಲ್ಲಿ ಸ್ವಚ್ಛತಾ ಕಾರ್ಯಗಳು ಆರಂಭಗೊಂಡಿವೆ. ನೈರ್ಮಲ್ಯ ಕಾರ್ಯ ಶುರುಮಾಡಲಾಗಿದೆ. ಇಲ್ಲದಿದ್ದಲ್ಲಿ ಭಾರೀ ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಸರಕಾರವನ್ನು ಕಾಡುತ್ತಿದೆ.
ಸತ್ತ ಪ್ರಾಣಿಗಳು ಕೊಳೆಯಲಾರಂಭಿಸಿವೆ. ಆಸ್ತಿ ಪಾಸ್ತಿಯ ಅವಶೇಷಗಳೂ ಚಿತ್ರಣವನ್ನೇ ಬದಲಿಸಿವೆ. ಹೀಗಾಗಿ ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.