ಸ್ಟಾರ್ಟ್ಅಪ್ ಹಬ್ ಕರ್ನಾಟಕ ಅಗ್ರಸ್ಥಾನ

ಭಾನುವಾರ, 16 ಜನವರಿ 2022 (14:26 IST)
ನವೋದ್ಯಮಗಳಲ್ಲಿ ಕರ್ನಾಟಕದ್ದೇ ಸಿಂಹಪಾಲು ಎಂದು ಸಚಿವ ಅಶ್ವತ್ ನಾರಾಯಣ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲೇ ಅತಿ ಹೆಚ್ಚಿನ ಸಾರ್ಟ್ ಅಪ್ ನಮ್ಮ ರಾಜ್ಯದಲ್ಲಿದ್ದು, ಸ್ಟಾರ್ಟ್‌ ಅಪ್‌ಗಳಿಗೆ ನೀಡುವ ಪ್ರಶಸ್ತಿಯಲ್ಲಿ ಕರ್ನಾಟಕಕ್ಕೆ ಸಿಂಹ ಪಾಲು ಎಂದು ಹೇಳಿದ್ದಾರೆ.
ಎಲಾ ಕ್ಷೇತ್ರದ ಸಾರ್ಟ್‌ಅಪ್ ನಲ್ಲಿ ನಮ್ಮ ರಾಜ್ಯ ಅಗ್ರಮಾನ್ಯದಲ್ಲಿದ್ದು, ಸಾರ್ಟ್‌ಅಪ್ ಪ್ರೋತ್ಸಾಹಿಸಲು ಕರ್ನಾಟಕ ಸೀಡ್ ಫಂಡ್ ಯೋಜನೆ ಜಾರಿಮಾಡಿದ್ದೇವೆ.
 
ಈಗಾಗಲೇ 200 ಕ್ಕಿಂತ ಹೆಚ್ಚು ಸಾರ್ಟ್‌ಅಪ್‌ಗಳಿಗೆ ಸೀಟ್ ಫಂಡ್‌ ನೀಡಲಾಗುತ್ತಿದೆ. ಇದುವರೆಗೂ 50 ಲಕ್ಷದವರೆಗೂ ಸೀಡ್ ಫಂಡ್ ನೀಡಲಾಗಿದೆ ಎಂದು ಅಶ್ವತ್ಥ್‌ ನಾರಾಯಣ್‌ ತಿಳಿಸಿದ್ದಾರೆ. ಇನ್ನೂ ರಾಜ್ಯದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆದಿದೆ. ಭಾರತ ವಿಶ್ವ ಗುರು ಅಗಬೇಕು ಎಂದರೆ ಅದಕ್ಕೆ ಸಾರ್ಟ್‌ಅಪ್ ಬೆಳವಣಿಗೆ ಬಹಳ ಮುಖ್ಯ ಎಂದು‌ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ