ಬಳ್ಳಾರಿ : ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಜನವರಿ 31ರವರೆಗೂ ಚಿತ್ರ ಮಂದಿರಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಇದಕ್ಕೆ ಥಿಯೇಟರ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಈಗಾಗಲೇ ಬೆಂಗಳೂರಿನಲ್ಲಿ 50-50 ರೂಲ್ಸ್ ಜಾರಿಗೊಳಿಸಲಾಗಿದೆ. ಅಲ್ಲದೇ ಕೊರೊನಾ ನಿಯಂತ್ರಣಕ್ಕಾಗಿ ಶನಿವಾರ ಹಾಗೂ ಭಾನುವಾರ ಕರ್ಫ್ಯೂ ವಿಧಿಸಲಾಗಿದೆ. ಇದೀಗ ಬಳ್ಳಾರಿಯಲ್ಲಿ ಹೊಸ ರೂಲ್ಸ್ ಕೇಳಿ ನಮಗೆ ಶಾಕ್ ಆಗಿದೆ.
ಇದರಿಂದ ನಮಗೆ ನಷ್ಟವಾಗುತ್ತದೆ ಎಂದು ಥಿಯೇಟರ್ ಮಾಲೀಕರು ಕಂಗಾಲಾಗಿದ್ದಾರೆ. ನಿನ್ನೆಯಷ್ಟೇ ಸಿನಿಮಾ ಬಿಡುಗಡೆ ಆಗಿವೆ. 31ರವರೆಗೂ ಬಹಳ ದಿನ ಆಗುತ್ತದೆ. ಜಿಲ್ಲಾಧಿಕಾರಿಗಳು ಒಂದು ವಾರ ಬಂದ್ ಮಾಡಬೇಕಿತ್ತು.
ಜಿಲ್ಲಾಧಿಕಾರಿಗಳು ಇದನ್ನು ಯೋಚನೆ ಮಾಡಬೇಕು ಎಂದಿದ್ದಾರೆ. 16 ದಿನ ಚಿತ್ರಮಂದಿರ ಬಂದ್ ಮಾಡಿದರೆ ನಮಗೆ ನಷ್ಟ ಆಗುತ್ತದೆ. ಚಿತ್ರಮಂದಿರ ಬಂದ್ ಮಾಡಿದರೆ ಸುಮಾರು 1,000ಕ್ಕೂ ಹೆಚ್ಚು ಜನರಿಗೆ ಸಮಸ್ಯೆ ಆಗುತ್ತದೆ. ಬಂದ್ ಮಾಡಿದರೆ ನಾಲ್ಕೈದು ದಿನ ಮಾಡಿ, 16 ದಿನ ಅಂದರೆ ದೀರ್ಘಾವಧಿವಾಗುತ್ತದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.