ರಾಜ್ಯ ಕಾಂಗ್ರೆಸ್ನಲ್ಲಿ ಪರಸ್ಪರ ಟ್ವೀಟ್ ವಾರ್ ಮುಂದುವರಿದಿದೆ. ಎಂ.ಬಿ.ಪಾಟೀಲ್ ವಿರುದ್ಧ ಡಿಕೆಶಿ ಹೇಳಿಕೆಗೆ ಕಾಂಗ್ರೆಸ್ನ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸುತ್ತಿದ್ದು, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಎಂ.ಬಿ.ಪಾಟೀಲ್, ಸಿದ್ದರಾಮಯ್ಯ ಹಾಗೂ ಈಶ್ವರ್ ಖಂಡ್ರೆ ಸೇರಿದಂತೆ ಅನೇಕ ಕೈ ಹಿರಿಯ ನಾಯಕರು ಡಿಕೆಶಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.ಪಕ್ಷದ ಅಧ್ಯಕ್ಷ ಎಂದ ಮಾತ್ರಕ್ಕೆ ಬೇರೆಯವರನ್ನು ಕಡೆಗಣಿಸುವಂತೆ ಮಾತನಾಡುವುದು ಸರಿಯಲ್ಲ. ನಾವು ಮಾಡಬೇಕಾದನ್ನು ರಮ್ಯಾ ಮಾಡಿ ತೋರಿಸಿದ್ದಾಳೆ. ವಿವಾದವನ್ನು ಮುಂದುವರಿಸಿಕೊಂಡು ಹೋದರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಹೀಗಾಗಿ ಇದನ್ನು ಇಲ್ಲಿಗೆ ಬಿಡುವಂತೆ ಸಲಹೆ ನೀಡಿದ್ದಾರೆ.