371(j) ತಿದ್ದುಪಡಿ ಮಾಡಲಾಗಿತ್ತು. ಆದ್ದರಿಂದ ಸರ್ಕಾರಿ ನೇಮಕಾತಿ ನಿಲ್ಲಿಸಲಾಗಿದೆ. ಹಿಂದೆ ಪ್ರವಾಹ ಬಂದಾಗ 1500 ಕೋಟಿ ಪರಿಹಾರ ನೀಡಿದ್ದರು. ರಾಜ್ಯದಲ್ಲಿ ಜನರ ಓಟಿನಿಂದ ಬಂದ ಸರ್ಕಾರವಲ್ಲ. ಬಿಎಸವೈ ಅವರನ್ನ ಮರ್ಯಾದೆ ಕಳೆದು ಕೆಳಗಿಳಿಸಿದ್ದಾರೆ. ಬಿಎಸ್‌ವೈ ಮೇಲೆ ಭ್ರಷ್ಟಾಚಾರ ಆರೋಪವಿತ್ತಾ.. ಅಥವಾ ಇಡಿ ಒತ್ತಡ ಹೇರಲಾಗಿತ್ತಾ. ಅವರನ್ನ ಬಲವಂತವಾಗಿ ಕೆಳಗಿಳಿಸಲಾಯ್ತಾ ಇದರ ಉತ್ತರ ಬಿಜೆಪಿ ಇನ್ನು ನೀಡಿಲ್ಲ. ಹೀಗಾಗಿ ಈ ಸರ್ಕಾರ ಅನೈತಿಕ ಸರ್ಕಾರವಾಗಿದೆ ಎಂದರು. ಇಂದು ನಡೆದ ಸಭೆ ಕಾಂಗ್ರೆಸ್ ಸಂಘಟನೆ ಬಲ ಪಡಿಸಲು ಸಭೆ ನಡೆಸಲಾಗಿದೆ. ಗ್ರಾಮ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಪಕ್ಷ ಬಲಗೊಳಿಸುವ ಉದ್ದೇಶ. ಪಕ್ಷ ಸಂಘಟನೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ತಿಳಿಸಿದ್ರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಸ್.ಆರ್.ಪಾಟೀಲ್, ಬಿ.ವಿ.ನಾಯಕ್, ಎನ್.ಎಸ್.ಬೋಸರಾಜ್, ಹೆಚ್.ಮುನಿಯಪ್ಪ ಸೇರಿದಂತೆ ಇತರಿದ್ದರು.