ರಾಜ್ಯ ನಾಯಕರನ್ನು ಕಾಡ್ತಿದೆ ವಯೋಮಿತಿ!

ಸೋಮವಾರ, 27 ಜೂನ್ 2022 (11:14 IST)
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಸರಿಸುಮಾರು ಇನ್ನೂ 10 ತಿಂಗಳು ಬಾಕಿ ಇದೆ.

ಈ ನಡುವೆ ರಾಜಕೀಯ ಪಕ್ಷಗಳ ಅಸಲಿ ಆಟಕ್ಕೆ ವೇದಿಕೆ ಸಜ್ಜಾಗುತ್ತಿದೆ. ಜುಲೈ ಬಳಿಕ ಎಲೆಕ್ಷನ್ ಜ್ವರ ಮತ್ತಷ್ಟು ಕಾವೇರಲಿದ್ದು, ಬಿಜೆಪಿಯಲ್ಲೀಗ ವಯಸ್ಸಿನ ಸಮಸ್ಯೆ ಎದುರಾಗಿದೆ. 120 ಶಾಸಕರ ಪೈಕಿ ಡಜನ್ಗೂ ಹೆಚ್ಚು ಶಾಸಕರಿಗೆ ಏಜ್ ಫಿಯರ್ ಇದೆ.

ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಕುರ್ಚಿಯಿಂದ ನಿರ್ಗಮಿಸಿದ್ದು, ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಮುನ್ಸೂಚನೆ ಕೊಟ್ಟಾಗಿದೆ. ಆದರೆ ಇನ್ನುಳಿದ ಕೆಲ ಶಾಸಕರಿಗೆ 75 ವಯಸ್ಸಿನ ಮಿತಿ ಅಡ್ಡ ಬರುತ್ತಾ ಎಂಬ ಭಯ ಇದೆ. ಹೈಕಮಾಂಡ್ ಟಿಕೆಟ್ ಕೊಡುತ್ತಾ ಇಲ್ವಾ..? ಅನ್ನೋ ಟೆನ್ಷನ್ನಲ್ಲಿದೆ.

2023ಕ್ಕೆ ಐವರು ಶಾಸಕರ ವಯಸ್ಸು 75 ದಾಟಲಿದ್ದು, ಬಹುತೇಕ ಎಲ್ಲರಿಗೂ ಟಿಕೆಟ್ ನಿರಾಕರಿಸಬಹುದಾ ಎಂಬ ಚರ್ಚೆ ಜೋರಾಗಿದೆ. 2023ರ ಹೊತ್ತಿಗೆ ನಾಲ್ವರು ಶಾಸಕರಿಗೆ 72 ದಾಟಲಿದ್ರೆ, ಮೂವರು ಶಾಸಕರಿಗೆ 71 ವರ್ಷ ದಾಟಲಿದೆ.

ಹಾಗಾಗಿ 75 ದಾಟಿದವರಿಗೆ ಮಾತ್ರ ಟಿಕೆಟ್ ನಿರಾಕರಿಸುತ್ತಾ..? ಅಥವಾ 75ರ ಸಮೀಪ ಇರೋರಿಗೂ ಟಿಕೆಟ್ ಕೊಡಲ್ಲ ಎನ್ನುತ್ತಾ ಬಿಜೆಪಿ ಹೈಕಮಾಂಡ್ ಎಂಬ ನಾನಾ ಲೆಕ್ಕಚಾರಗಳು ನಡೆಯುತ್ತಿವೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ