ಉಪಚುನಾವಣೆಯಲ್ಲಿ 4 ಸ್ಥಾನ ಗೆದ್ದು ಬೀಗಿದ ಬಿಜೆಪಿ: ಆಪ್‌, ಸಮಾಜವಾದಿಗೆ ಆಘಾತ

ಭಾನುವಾರ, 26 ಜೂನ್ 2022 (17:08 IST)

ದೇಶಾದ್ಯಂತ ಜೂನ್ 23 ರಂದು ನಡೆದಿದ್ದ 7 ವಿಧಾನಸಭೆ ಹಾಗೂ 3 ಲೋಕಸಭೆ ಉಪಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು ಬಿಜೆಪಿ 3 ಲೋಕಸಭೆ ಹಾಗೂ 1 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರವು ದೆಹಲಿಯ ರಾಜಿಂದರ್ ನಗರದಲ್ಲಿ ಜಯ ಸಾಧಿಸಿದರೆ ಪಂಜಾಬ್‌ ಮುಖ್ಯ ಮಂತ್ರಿ ಭಗವಾನ್‌ ಮನ್‌ ಹೊಂದಿದ್ದ ಸಂಗ್ರೂರ್ ಲೋಕಸಭೆ ಉಪಚುನಾವಣೆಯಲ್ಲಿ ಸೋಲು ಕಂಡಿದೆ.

ಉತ್ತರಪ್ರದೇಶದ ಅಜಮ್‌ ಘಡ ಹಾಗೂ ರಾಮ್ಪುರ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಪ್ರತಿನಿಧಿಸುತ್ತಿದ್ದ ಅಜಮ್‌ ಘಢ ಕ್ಷೇತ್ರ ಗೆದ್ದುಕೊಂಡಿದೆ.

ರಾಮ್ಪುರ ಲೋಕಸಭೆ ಮತ ಎಣಿಕೆ ಕಾರ್ಯ ಮುಂದುವರೆದಿದ್ದು ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ತ್ರಿಪುರಾದ ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 3 ರಲ್ಲಿ ಗೆದ್ದು ಕಾಂಗ್ರೆಸ್ 1ರಲ್ಲಿ ಗೆದ್ದಿದೆ. ಇದರಿಂದ ತ್ರಿಪುರಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಖಾತೆ ತೆರೆಯುವಲ್ಲಿ ಸಫಲವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ