ಡೆಡ್ಲಿ ಕೊರೊನಾಗೆ ರಾಜ್ಯದ ಶಾಸಕ ಬಲಿ

ಗುರುವಾರ, 24 ಸೆಪ್ಟಂಬರ್ 2020 (22:34 IST)
ಡೆಡ್ಲಿಕೊರೊನಾ ವೈರಸ್ ನಿಂದಾಗಿ ಶಾಸಕರೊಬ್ಬರು ಸಾವನ್ನಪ್ಪಿದ್ದಾರೆ.

ಬೀದರ ಜಿಲ್ಲೆ ಬಸವ ಕಲ್ಯಾಣ ಮತಕ್ಷೇತ್ರದ ಶಾಸಕ ನಾರಾಯಣರಾವ್ (65) ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.

ಶಾಸಕರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಶಾಸಕ ನಾರಾಯಣರಾವ್ (65) ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಕೊರೊನಾ ಸೋಂಕಿನ ಚಿಕಿತ್ಸೆ ಫಲಕಾರಿಯಾಗದೇ ಶಾಸಕರು ನಿಧನರಾಗಿದ್ದಾರೆ. ಶಾಸಕ ನಾರಾಯಣರಾವ್ ಗೆ ನ್ಯುಮೋನಿಯಾ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಸಮಸ್ಯೆಯಿದ್ದವು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ