ಬೆಂಗಳೂರಲ್ಲಿ ಸಜ್ಜಾಗ್ತಿದೆ ರಾಜ್ಯದ 2ನೇ ಮಿಲ್ಕ್‌ಬ್ಯಾಂಕ್‌!

ಗುರುವಾರ, 13 ಜುಲೈ 2023 (20:05 IST)
ಹುಟ್ಟಿದ ಪ್ರತಿಮಗುವಿಗೂ ತಾಯಿಯ ಎದಹಾಲು ಅಮೃತಪಾನ ಎನ್ನಲಾಗುತ್ತೆ. ಆದ್ರೆ ಅದೆಷ್ಟೋ ಮಕ್ಕಳು ಹುಟ್ಟಿದಾಗಲೇ ಅಮ್ಮನನ್ನ ಕಳೆದುಕೊಂಡು ಅನಾಥವಾಗಿಬಿಡುತ್ತೆ. ಅದೆಷ್ಟೋ ಮಕ್ಕಳು ತಾಯಿ ಇದ್ರೂ ಎದೆಹಾಲು ಸಿಗದೇ ಅಪೌಷ್ಠಿಕತೆಯಿಂದ ಬೆಳೆಯುತ್ತವೆ. ಈ ರೀತಿಯ ಸಮಸ್ಯೆಗೆ ಮುಕ್ತಿ ಕೊಡೋಕೆ ಸಜ್ಜಾಗಿರೋ ಸರ್ಕಾರ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಿಲ್ಕ್‌ಬ್ಯಾಂಕ್‌ ಸ್ಥಾಪನೆಗೆ ಸಜ್ಜಾಗಿದೆ.
 
ಸದ್ಯ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಈಗಾಗಲೇ ಮಿಲ್ಕ್‌ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದ್ದು, ಸಕ್ಸಸ್‌ ಕಂಡಿದೆ. ಇದೀಗ ಶಿವಾಜಿನಗರದ ಸರ್ಕಾರಿ ಘೋಷಾ ಆಸ್ಪತ್ರೆಯಲ್ಲಿ ರಾಜ್ಯದ ಎರಡನೇ ಮಿಲ್ಕ್‌ಬ್ಯಾಂಕ್‌ ತೆರೆಯಲು ಸಕಲ ಸಿದ್ಧತೆ ನಡೆದಿದೆ. ಸದ್ಯ ಆಸ್ಪತ್ರೆಯಲ್ಲಿ ಎಲ್ಲಾ ಸಿದ್ಧತೆ ನಡೆದಿದ್ದು, ಲ್ಯಾಬ್‌ನಿಂದ ಹೈಜೆನ್‌ ರಿಪೋರ್ಟ್ ಬಂದ ತಕ್ಷಣ ಇನ್ನು ಮೂರ್ನಾಲ್ಕು ದಿನದಲ್ಲಿ ಮಿಲ್ಕ್‌ ಬ್ಯಾಂಕ್‌ ಕಾರ್ಯನಿರ್ವಹಿಸುವ ಲಕ್ಷಣಗಳು ಎದ್ದುಕಾಣ್ತಿದೆ.ಈಗಾಗಲೇ ವಾಣಿವಿಲಾಸ ಆಸ್ಪತ್ರೆಯಲ್ಲಿ ಘೋಷಾ ಆಸ್ಪತ್ರೆಯ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಮಿಲ್ಕ್‌ಬ್ಯಾಂಕ್‌ ಆರಂಭಕ್ಕೆ ತಯಾರಿ ನಡೆದಿದೆ
 
ಇನ್ನು ಈಗಾಗಲೇ ಮಿಲ್ಕ್‌ಬ್ಯಾಂಕ್‌ಗೆ ಪ್ರತ್ಯೇಕ ರೂಂ ಮೀಸಲಿಟ್ಟಿದ್ದು, ಆಸ್ಪತ್ರೆಯಲ್ಲಿ ದಾಖಲಾಗುವ ನವಜಾತ ಶಿಶುಗಳಿಗೆ, ತಾಯಿ ಇಲ್ಲದ ಮಕ್ಕಳಿಗೆ ವೈದ್ಯರ ಸಲಹೆ ಬಳಿಕ ಮಿಲ್ಕ್‌ಬ್ಯಾಂಕ್‌ನಿಂದ ಹಾಲು ನೀಡಲು ಚಿಂತನೆ ನಡೆದಿದೆ. 24 ಲಕ್ಷ ರೂಪಾಯಿ ವೆಚ್ಚದಲ್ಲಿ ಮಿಲ್ಕ್‌ಬ್ಯಾಂಕ್‌ ಸಿದ್ಧವಾಗಿದ್ದು, ಎದೆಹಾಲನ್ನು 6 ತಿಂಗಳವರೆಗೆ ಶೇಖರಣೆ ಮಾಡೋ ವ್ಯವಸ್ಥೆ ಕೂಡ ಮಾಡಲಾಗಿದೆ. ರೋಗಗ್ರಸ್ಥ ಬಾಣಂತಿಯರ ಮಗು, ಅನಾಥಮಗು ಸೇರಿದಂತೆ ಆಸ್ಪತ್ರೆಗೆ ದಾಖಲಾದವರಲ್ಲಿ ಅವಶ್ಯಕತೆ ಇರೋ ಮಗುವಿಗೆ ಹಾಲು ನೀಡಲು ಮಿಲ್ಕ್‌ಬ್ಯಾಂಕ್‌ ಸಜ್ಜಾಗ್ತಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ