‘ರಾಜ್ಯದ ಸ್ಥಿತಿಗತಿ ಬಗ್ಗೆ ವಿವರಣೆ’
ಪ್ರಧಾನಿ ಮೋದಿಗೂ ಮುನ್ನ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೋನಾ ತಡೆಗೆ ಸಲಹೆ ನೀಡಿದ್ರು..ಈಗ ನಮ್ಮೆಲ್ಲರನ್ನೂ ಸಂಕಷ್ಟಕ್ಕೆ ದೂಡಿದ್ದ ಕೊರೋನಾ 3 ಅಲೆಗಳನ್ನ ಯಶಸ್ವಿಯಾಗಿ ನಿಭಾಯಿಸಿದ್ಧೇವೆ..ಇದೀಗ 4ನೇ ಅಲೆಯನ್ನೂ ಸಮರ್ಥವಾಗಿ ಎದುರಿಸಬೇಕಾಗಿದೆ..ಎಲ್ಲರೂ ತಜ್ಞರ ಸಲಹೆಯನ್ನ ಗಂಭೀರವಾಗಿ ಪರಿಗಣಿಸಿ, ಮುನ್ನೆಚ್ಚರಿಕೆಯಿಂದಿರಿ ಎಂದು ಅಮಿತ್ ಶಾ ಸೂಚನೆ ನೀಡಿದ್ರು..ಇನ್ನು ಮೋದಿ ಸಭೆ ವೇಳೆ ರಾಜ್ಯದಲ್ಲಿನ ಸ್ಥಿತಿಗತಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ವರದಿ ನೀಡಿದ್ದಾರೆ..ಈಗಾಗಲೇ ರಾಜ್ಯದಲ್ಲಿ 98% ಎರಡನೇ ಡೋಸ್ ಪಡೆದಿದ್ದು, 10-12 ಲಕ್ಷ ಲಸಿಕೆ ಬಾಕಿ ಇದೆ..ಬೂಸ್ಟರ್ ಡೋಸ್ 55% ಆಗಿದ್ದು, 45% ಬಾಕಿ ಇದೆ ಅದನ್ನ ಶೀಘ್ರದಲ್ಲೇ ನೀಡಿತ್ತೇವೆ..ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ಮೋದಿಗೆ ಸಿಎಂ ಬೊಮ್ಮಾಯಿ ವರದಿ ನೀಡಿದ್ರು.