ಇಂದು ರಾಜ್ಯವ್ಯಾಪಿ ಬೃಹತ್ ಕೋವಿಡ್ ವ್ಯಾಕ್ಸಿನ್ ಅಭಿಯಾನ ಕೈಗೊಳ್ಳಲಾಗಿತ್ತು. ಪ್ರಧಾನಿ ನರೇಂದ್ರಮೋದಿ ಹುಟ್ಟುಹಬ್ಬದ ಹಿನ್ನಲೆ ವ್ಯಾಕ್ಸಿನ್ ಅಭಿಯಾನವನ್ನ ನಗರದ ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಇಟ್ಟುಕೊಳಲಾಗಿತ್ತು. ಕೋವಿಡ್ ವ್ಯಾಕ್ಸಿನ್ ಕ್ಯಾಂಪೇನ್ ಅಭಿಯಾನಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್
ಚಾಲನೆ ನೀಡಿದರು.
ಬೆಂಗಳೂರಿನಾದ್ಯಂತ 5 ಲಕ್ಷ ಕೋವಿಡ್ ವ್ಯಾಕ್ಸಿನ್ ನೀಡಲು ಬಿಬಿಎಂಪಿ ತಯಾರಿ ನಡೆಸಿದ್ದು, ರಾಜ್ಯದಲ್ಲಿಂದು 30 ಲಕ್ಷ ಲಸಿಕೆ ನೀಡಲು ಸರ್ಕಾರ ಟಾರ್ಗೆಟ್ ಮಾಡಿದೆ