ಬೆಂಗಳೂರು: ಎರಡೇ ದಿನದಲ್ಲಿ ರಾಜ್ಯಕ್ಕೆ ಮುಂಗಾರುಮಳೆದ ಪ್ರವೇಶವಾಗಬಹುದು. ನೀರಿಗಾಗಿ ಬವಣೆ ನಿಲ್ಲಬಹುದು ಎಂದು ಕಾಯುತ್ತಿದ್ದವರಿಗೆ ನಿರಾಸೆ ತರುವ ಸುದ್ದಿಯನ್ನು ವಿಪತ್ತು ನಿರ್ವಹಣಾ ಇಲಾಖೆ ನೀಡಿದೆ.
ಅರಬ್ಬಿ ಸಮದ್ರದ ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮ ಬಲವಾದ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗದೆ. ಇದರಿಂದಾಗಿ ಇನ್ನೂ ಎರಡು ದಿನ ತಡವಾಗಿ ಅಂದರೆ ಜೂನ್ 6 ರಂದು ಮುಂಗಾರು ರಾಜ್ಯ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಸುಳಿಗಾಳಿಯಿಂದಾಗಿ ಪೂರ್ವ ಭಾಗದಲ್ಲಿನ ಮೋಡಗಳನ್ನು ಪಶ್ಚಿಮ ಭಾಗ ತನ್ನತ್ತ ಸೆಳೆದುಕೊಂಡಿದೆ. ಹೀಗಾಗಿ ಮುಂಗಾರು ತಡವಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. ಸೋಮವಾರದ ವೇಳೆಗೆ ಈ ಸುಳಿಗಾಳಿ ಕ್ಷೀಣವಾಗುವ ಸಾಧ್ಯತೆಯಿದೆ.