ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ 'ಕೋವಿಡ್ ಪರೀಕ್ಷೆ' ನಿಲ್ಲಿಸಿ : ರಾಜ್ಯ ಸರ್ಕಾರ ಆದೇಶ

ಶುಕ್ರವಾರ, 25 ಫೆಬ್ರವರಿ 2022 (14:22 IST)
ಬೆಂಗಳೂರು:-ರಾಜ್ಯದಲ್ಲಿ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಖಾಸಗೀ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆ ಮೀಸಲು ಆದೇಶವನ್ನು ಸರ್ಕಾರ ರದ್ದುಗೊಳಿಸಿತು.
ಈ ಈಗ ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುವ ಕೋವಿಡ್ ಲಕ್ಷಣರಹಿತರ ಕೊರೋನಾ ಪರೀಕ್ಷೆಯನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಲಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಆಸ್ಪತ್ರೆಗೆ ದಾಖಲಾಗುವ ಮೊದಲು ರೋಗಲಕ್ಷಣವಿಲ್ಲದ ರೋಗಿಗಳ ಮುನ್ನೆಚ್ಚರಿಕೆ ಕೋವಿಡ್ 19 ಪರೀಕ್ಷೆಯನ್ನು ನಿಲ್ಲಿಸುವಂತೆ ಸೂಚನೆಯನ್ನು ನೀಡಿ.
ಇನ್ನೂ ದೈನಂದಿನ ಪರೀಕ್ಷೆ, ಚಿಕಿತ್ಸೆಗಾಗಿ ಬರುವವರಿಗೆ, ದೊಡ್ಡ ಮಟ್ಟದ ಸರ್ಜರಿ ಸೇರಿದಂತೆ ಇತರೆ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಗಳಿಗೆ ಕಡ್ಡಾಯಗೊಳಿಸಿರುವ ಕೋವಿಡ್ ಪರೀಕ್ಷೆಯನ್ನು ಸಹ ರದ್ದುಗೊಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ