ಬೆಳಗಾವಿಯಲ್ಲಿ ಮತ್ತೆ ಕಲ್ಲು ತೂರಾಟ
ಬೆಳಗಾವಿಯಲ್ಲಿ ಮತ್ತೆ ಕಲ್ಲು ತೂರಾಟ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಶಿವಾಜಿ ಮೂರ್ತಿ ಮೆರವಣಿಗೆ ವೇಳೆ ಮೂಲಕ ಕಲ್ಲು ತೂರಾಟ ನಡೆಸಲಾಗಿದೆ. ನಗರದ ಕೋಟೆ ಕೆರೆ ಬಳಿಯ ಆಜಾದ ನಗರ ಮತ್ತು ಮಹಾಂತೇಶ ನಗರದಲ್ಲಿ ಘಟನೆ ನಡೆದಿದೆ.
ಶಾಂತ ರೀತಿ ಹೋಗುತ್ತಿದ್ದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಧರ್ಮವೀರ ಸಂಭಾಜಿ ವೃತ್ತದಿಂದ ಕಣಬರಗಿಗೆ ಹೋಗುತ್ತಿದ್ದ ಮೆರವಣಿಗೆ ಇದಾಗಿತ್ತು. ಕಣಬರಗಿಯಲ್ಲಿ ಪ್ರತಿಷ್ಠಾಪನೆಗೆ ತೆಗೆದುಕೊಂಡು ಹೋಗುತ್ತಿದ್ದ ಮೂರ್ತಿಯ ಮೆರವಣಿಗೆ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ಪೂರ್ವ ನಿಯೋಜಿತವಾಗಿ ಕೀಡಗೇಡಿಗಳಿಂದ ಕೃತ್ಯ ನಡೆದಿದೆ. ಸ್ಥಳದಲ್ಲಿ ಬೀಗುವಿನ ವಾತಾವರಣ ನಿರ್ಮಾಣವಾಗಿದೆ. ಗುಂಪು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಮಾರ್ಕೆಟ್ ಮತ್ತು ಮಾಳಮಾರುತಿ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.