ಕಲ್ಯಾಣ ಪರ್ವ ಮೆರವಣಿಗೆಗೆ ವಿರೋಧ

ಸೋಮವಾರ, 29 ಅಕ್ಟೋಬರ್ 2018 (15:39 IST)
ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಕೊನೆಯ ದಿನದ ಕಲ್ಯಾಣ ಪರ್ವ ಕಾರ್ಯಕ್ರಮ ಮೆರವಣಿಗೆ ವೇಳೆ ವಿರೋಧ ವ್ಯಕ್ತವಾಗಿದೆ.

ಬಸವೇಶ್ವರ ಪಂಚ ಕಮಿಟಿ ಸದಸ್ಯರಿಂದ ಕಲ್ಯಾಣ ಪರ್ವ ಮೆರವಣಿಗೆಗೆ ವಿರೋಧ ವ್ಯಕ್ತವಾಗಿದೆ. ಮಾತೆ ಮಹಾದೇವಿಗೆ ಕಮಿಟಿಯಿಂದ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ.

ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಕೊನೆಯ ದಿನದ ಕಲ್ಯಾಣ ಪರ್ವ ಕಾರ್ಯಕ್ರಮ ಮೆರವಣಿಗೆ ವೇಳೆ ಘಟನೆ ನಡೆದಿದೆ. ಸತತ 17 ವರ್ಷಗಳಿಂದ ವಿರೋಧ ವ್ಯಕ್ತಪಡಿಸುತ್ತಿರವ ಕಮಿಟಿ ಸದಸ್ಯರು, ಆಕ್ರೋಶ ವ್ಯಕ್ತಪಡಿಸಿದರು.

ಬಸವಕಲ್ಯಾಣ ನಗರದ ಪರುಷ ಕಟ್ಟೆಯಿಂದ ಬಸವ ಜ್ಯೋತಿ ಯಾತ್ರೆ ಮೆರವಣಿಗೆಗೆ ಮಾತೆ ಮಹಾದೇವಿ ಚಾಲನೆ ನೀಡಿದರು. ನಗರದ ಬಸವೇಶ್ವರರ ವೃತ್ತದ ಮೂಲಕ‌ ಹಾದು ಹೋಗುವಾಗ ವಿರೋಧ ವ್ಯಕ್ತವಾದ ಘಟನೆ ನಡೆದಿದೆ. ಬಸವಣ್ಣ ನವರ ವಚನಾಂಕಿತ ತಿದ್ದಿದ ಹಿನ್ನೆಲೆಯಲ್ಲಿ ಕಮಿಟಿ ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ. ಪಂಚ ಕಮಿಟಿ ಸದಸ್ಯರನ್ನು ಸಮಧಾನ ಪಡಿಸಿಲು ಪೊಲೀಸರು ಹರಸಾಹಸ ಪಟ್ಟರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ