ಬೀದಿನಾಟಕ ಮತ್ತು ಗೀತಗಾಯನ ಕಾರ್ಯಕ್ರಮ

ಶುಕ್ರವಾರ, 7 ಜನವರಿ 2022 (20:04 IST)
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸೋಮವಾರಪೇಟೆ ತಾಲೂಕು ಅರೋಗ್ಯ ಶಿಕ್ಷಣಾಧಿಕಾರಿಯವರ ಕಾರ್ಯಾಲಯ ಕುಶಾಲನಗರ ಇವರ ವತಿಯಿಂದ ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆಯ ಈ.ರಾಜು ಮತ್ತು ತಂಡದವರಿಂದ ಅರೋಗ್ಯ ಇಲಾಖೆಯ ಹಲವಾರು ಯೋಜನೆಗಳ ಕುರಿತಂತೆ ಬೀದಿನಾಟಕ ಮತ್ತು ಗೀತಗಾಯನದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವು ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿತು. 
ಮುಳ್ಳುಸೋಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೆಲುವರಾಜು ಅವರು ಕಂಜರ ನುಡಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಲಿಂಗಮೂರ್ತಿ ಅವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮುಳ್ಳುಸೋಗೆ ಗ್ರಾ.ಪಂ.ಸದಸ್ಯರಾದ ಮಣಿ, ಮುರಳಿ, ಗಣೇಶ್ ಅವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಕಾವೇರಪ್ಪ ಅವರು ಸ್ವಾಗತಿಸಿದರು. ಕಲಾವೇದಿಕೆಯ ಈ.ರಾಜು  ಅವರು ನಿರೂಪಿಸಿ, ವಂದಿಸಿದರು.
ಕಲಾವಿದರಾದ ಚಂದ್ರಪ್ಪ, ಶಿವಕುಮಾರ್, ದೇವರಾಜು, ಗೌರಮ್ಮ, ಸಂತೋಷ, ಗಂಗಾಧರ್ ಅವರು ಬೀದಿ ನಾಟಕ ಮತ್ತು ಜಾಗೃತಿ ಗೀತೆಗಳನ್ನು ಹಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ