ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
ಕೋಣನಕುಂಟೆಯಲ್ಲಿರುವ ದೊಡ್ಡಪ್ಪನ ಮನೆಗೆ ಹೋಗಿದ್ದ ವಿದ್ಯಾರ್ಥಿ ದೊಡ್ಡಪ್ಪನ ಮಗನ ಜೊತೆ ಕ್ರಿಕೆಟ್ ಆಟ ವೀಕ್ಷಿಸುತ್ತಿದ್ದ. ಬಳಿಕ ಮಲಗಿದ್ದ. ಬೆಳಗಿನ ಜಾವ ಅಪಾರ್ಟ್ ಮೆಂಟ್ ಕಟ್ಟಡದ 23 ನೇ ಮಹಡಿಯಿಂದ ಸೆಲ್ಫೀ ವಿಡಿಯೋ ಮಾಡಿ ಪೋಷಕರಿಗೆ ಕಳುಹಿಸಿದ್ದು, ಬಳಿಕ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಬ್ಧ ಕೇಳಿ ಅಪಾರ್ಟ್ ಮೆಂಟ್ ಸಿಬ್ಬಂದಿ ಹೋಗಿ ನೋಡಿದ್ದಾಗ ವಿದ್ಯಾರ್ಥಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.