ವಿವಾಹಿತ ಯುವತಿಗೆ ಮತ್ತಿನ ಔಷಧ ನೀಡಿ ಬಲಾತ್ಕಾರ
ಕಳೆದ ಡಿಸೆಂಬರ್ ನಲ್ಲಿ ಈ ಘಟನೆ ನಡೆದಿತ್ತು. ಮಹಿಳೆಯನ್ನು ಮನೆಗೆ ಕರೆಸಿಉಪಾಹಾರದಲ್ಲಿ ಮತ್ತು ಬರಿಸುವ ಔಷಧ ನೀಡಿ ಪ್ರಜ್ಞೆ ತಪ್ಪಿಸಲಾಗಿತ್ತು. ಬಳಿಕ ಕೃತ್ಯದ ಫೋಟೋ ತೆಗೆದುಕೊಂಡಿದ್ದರು.
ಇದೇ ಫೋಟೋ ಬಳಸಿ ಬೆದರಿಸಿ ಮಹಿಳೆಯ ಮೇಲೆ ಹಲವು ಬಾರಿ ದೌರ್ಜನ್ಯವೆಸಗಿದ್ದರು. ಇದೀಗ ಕಿರುಕುಳ ತಾಳಲಾರದೇ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.