ಬಯಲು ಬಹಿರ್ದೆಸೆ ತಡೆಯಲು ಶಿಳ್ಳೆ ಅಭಿಯಾನ

ಭಾನುವಾರ, 16 ಅಕ್ಟೋಬರ್ 2016 (14:59 IST)
ಪ್ರಧಾನಿ ಮೋದಿ ಅವರ ಮಹಾತ್ವಾಕಾಂಕ್ಷೆಯ 'ಸ್ವಚ್ಛತಾ ಅಭಿಯಾನ' ವನ್ನು ಗಂಭೀರವಾಗಿ ಪರಿಗಣಿಸಿರುವ ಗದಗದ
ಹಾತಲಗೇರಿಯ ಸಮಾಜಕಾರ್ಯ ವಿದ್ಯಾರ್ಥಿಗಳು ವಿನೂತನ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. 
 
ಶೌಚಾಲಯ ನಿರ್ಮಾಣ ಜಾಗೃತಿಗಿಳಿದಿರುವ 'ಕನ್ನಡ ಕಿರಣ BSW' ಕಾಲೇಜು ವಿದ್ಯಾರ್ಥಿಗಳು, ಇಂದು ಮುಂಜಾನೆ 6 ಗಂಟೆಯಿಂದ ಅಭಿಯಾನ ಆರಂಭಿಸಿದ್ದಾರೆ. ಬಯಲು ಬಹಿರ್ದೆಸೆಗಾಗಿ ಹೋಗುತ್ತಿದ್ದವರನ್ನು ಶಿಳ್ಳೆ ಹಾಕಿ ತಡೆದು ಅವರ ಕೈಗೆ ಗುಲಾಬಿ ಹೂವನ್ನಿತ್ತು ಕಾಲಿಗೆ ಬಿದ್ದು ವಿನಯಪೂರ್ಕವಾಗಿ ಶೌಚಾಲಯದ ಮಹತ್ವವನ್ನು ಮನವರಿಗೆ ಮಾಡುತ್ತಿದ್ದಾರೆ. 
 
ಅಷ್ಟೇ ಅಲ್ಲ ತಮ್ಮ ವಿನಂತಿಗೆ ಒಪ್ಪಿಕೊಂಡವರ ಮನೆಗಳ ಎದುರು ಶೌಚಾಲಯ ಗುಂಡಿಯನ್ನು ತೆಗೆದು ಸಹಾಯ ಮಾಡುತ್ತಿದ್ದಾರೆ. 
 
ಪಿ.ಡಿ ಓ. ಎನ್ ಬಿ ದೇಸಾಯಿ ಸೇರಿದಂತೆ ಸ್ಥಳೀಯ ಮುಖಂಡರು ವಿದ್ಯಾರ್ಥಿಗಳ ಈ ವಿನೂತನ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ