ಮಂಡ್ಯದಲ್ಲಿ ಮತ್ತೆ ಶುರುವಾಯ್ತು ಅಂಥ ಕೆಲಸ

ಸೋಮವಾರ, 9 ಸೆಪ್ಟಂಬರ್ 2019 (16:36 IST)
ಮಂಡ್ಯದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

 
ಮಳೆಯಿಂದಾಗಿ ಕೃಷಿ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ ರೈತ ಬಾಂಧವರು.

ಭೂಮಿಯನ್ನು ಉಳುಮೆ ಮಾಡಿ, ಹದ ಮಾಡಿಕೊಂಡು ಭತ್ತವನ್ನು ನಾಟಿ ಮಾಡುತ್ತಿದ್ದಾರೆ ಅನ್ನದಾತ ರೈತ.

ಮಂಡ್ಯ  ಕೃಷ್ಣರಾಜಪೇಟೆ ತಾಲ್ಲೂಕಿನಾದ್ಯಂತ ಉತ್ತಮವಾದ ಮಳೆಯಾಗಿದ್ದು, ಹೇಮಾವತಿ ಎಡದಂಡ ನಾಲೆ, ಹೇಮಗಿರಿ ನಾಲೆ ಹಾಗೂ ಮಂದಗೆರೆ ಎಡದಂಡೆ, ಬಲದಂಡೆ ನಾಲೆಯಲ್ಲಿ ನೀರನ್ನು ಹರಿಸಿರುವುದರಿಂದ ಅನ್ನದಾತನಾದ ರೈತನು ಹರ್ಷಗೊಂಡಿದ್ದಾನೆ.

ಬೇಸಾಯ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಭತ್ತದ ನಾಟಿ ಮಾಡುವ ಕಾರ್ಯವು ಭರದಿಂದ ಸಾಗಿದೆ.
ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ