ಹರಿರಾಂ ಶಂಕರ್ ತಿಳಿಸಿದ್ದಾರೆ.
ಪೋಸ್ಟ್ ಮಾರ್ಟಮ್‌ಗೂ ಮುನ್ನ ನಡೆಸಿದ ಮೃತದೇಹದ ಕೋವಿಡ್ ಟೆಸ್ಟ್ ನಲ್ಲಿ ರಿಪೋರ್ಟ್ ನೆಗೆಟಿವ್ ಬಂದಿದೆ. ರಿಪೋರ್ಟ್ ನೆಗೆಟಿವ್ ಬೆನ್ನಲ್ಲೇ ಮೃತದೇಹದ ಪೋಸ್ಟ್ ಮಾರ್ಟಮ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ ಬಂದಿದೆ ಎಂಬ ಆತಂಕದಲ್ಲಿ ರಮೇಶ್ ಮತ್ತು ಗುಣ ದಂಪತಿ ನೇಣಿಗೆ ಶರಣಾಗಿದ್ದರು. ಮಂಗಳೂರು ಹೊರವಲಯದ ಕುಳಾಯಿಯ ರಹಜಾ ಅಪಾರ್ಟ್‌ಮೆಂಟ್ ನಲ್ಲಿ ಈ ಘಟನೆ ನಡೆದಿತ್ತು. ರಮೇಶ್ ಪತ್ನಿ ಗುಣ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದರು. ಡೆತ್ ನೋಟ್ ನಲ್ಲಿ ಕೊರೊನಾ ಲಕ್ಷಣಗಳು ಕಾಣುತ್ತಿರುವ ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ. ಈಗ ನನ್ನ ಪತಿಗೂ ಕೊರೊನಾ ಗುಣಲಕ್ಷಣ ಕಾಣಿಸಿಕೊಳ್ಳುತ್ತಿದೆ. ಬ್ಲ್ಯಾಕ್ ಫಂಗಸ್ ನಿಂದ ಕಣ್ಣು ಮತ್ತು ಇತರ ಭಾಗಗಳನ್ನು ಕಳೆದುಕೊಂಡಿದ್ದನ್ನು ನೋಡಿದಾಗ, ನಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದಾಗ ನಮಗೂ ಭಯ ಕಾಡುತ್ತಿದೆ. ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ ಎಂದು ಮರಣ ಪತ್ರದಲ್ಲಿ ಉಲ್ಲೇಖಿಸಿದ್ದರು. ಇದಲ್ಲದೆ ಗುಣವತಿ ಅವರಿಗೆ ಇತರ ಆರೋಗ್ಯ ಸಮಸ್ಯೆಯೂ ಇರುವುದನ್ನು ಬರೆದುಕೊಂಡ ದಂಪತಿಗೆ ಮಕ್ಕಳಿಲ್ಲ ಕೊರಗು ಕೂಡಾ ಕಾಡಿತ್ತು ಎಂದು ಹೇಳಲಾಗಿದೆ.