ಫೇಸ್ ಬುಕ್, ಟ್ವೀಟರ್ ಗೆ ಎಂಟ್ರಿ ಕೊಟ್ಟ ಸುಮಲತಾ ಅಂಬರೀಶ್

ಸೋಮವಾರ, 11 ಮಾರ್ಚ್ 2019 (17:12 IST)
ಮೈಸೂರು : ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆದ ಬೆನ್ನಲೇ ಇದೀಗ ಸುಮಲತಾ ಅಂಬರೀಶ್ ಅವರು ಅಧಿಕೃತ ವಾಗಿ ಸೋಶಿಯಲ್ ಮೀಡಿಯಾಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಕೊಳ್ಳದ ಸುಮಲತಾ ಅಂಬರೀಶ್ ಅವರು ಜನರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಇದೀಗ ಫೇಸ್ ಬುಕ್, ಟ್ವೀಟರ್ ನಲ್ಲಿ ಅಧಿಕೃತವಾಗಿ  ಪೇಜ್ ತೆರೆದಿದ್ದಾರೆ.

 

ಈ ಕುರಿತು ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸುಮಲತಾ ಅವರು, ನಾನು ನಿಮ್ಮ ಸುಮಲತಾ ಅಂಬರೀಶ್, ನಾನು ಇನ್ನು ನಿಮಗೆ ಸಾಮಾಜಿಕ ಜಾಲತಾಣಗಳಲ್ಲೂ ಸಿಗುತ್ತೇನೆ. ನಿಮ್ಮ ಜೊತೆ ಫೇಸ್ ಬುಕ್, ಟ್ವೀಟರ್ ನಲ್ಲಿ ಇರುತ್ತೇನೆ. ನನ್ನ ಅಧಿಕೃತ ಪೇಜ್ ನಲ್ಲಿ ನಿಮ್ಮೊಂದಿಗೆ ಸಂಪರ್ಕಕ್ಕೆ ಸಿಗುತ್ತೇನೆ. ತಮ್ಮ ಸಲಹೆ, ಮಾರ್ಗದರ್ಶನ, ಸಹಕಾರ ಸದಾ ಹೀಗೆ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ