ಲೋಕಸಭೆ ಚುನಾವಣೆಗೆ ದಿನ ನಿಗದಿಯಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಪರಿಣಾಮ ಜನಪ್ರತಿನಿಧಿಗಳ ಬ್ಯಾನರ್ , ಫ್ಲೆಕ್ಸ್ ಗೆ ಸಂಚಕಾರ ಬಂದಿದ್ದು ಕಿತ್ತು ಒಗೆಯಲಾಗುತ್ತಿದೆ.
ಕೋಲಾರ ನಗರದಲ್ಲಿ ಅಳವಡಿಸಲಾಗಿರುವ ಬ್ಯಾನರ್, ಪ್ಲೇಕ್ಸ್ ಗಳನ್ನು ನಗರಸಭೆ ತೆರವುಗೊಳಿಸಿತು. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಘೋಷಣೆಯಾದ ಹಿನ್ನಲೆಯಲ್ಲಿ ತೆರವು ಕೆಲಸ ಮಾಡಲಾಗುತ್ತಿದೆ.
ವಿವಿಧ ರಾಜಕೀಯ, ಖಾಸಗಿ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳ ಬಳಿ ಅಳವಡಿಸಿದ್ದ ಪ್ಲೆಕ್ಸ್ ಗಳನ್ನು ಜೆಸಿಬಿಯಿಂದ ತೆರವು ಮಾಡಲಾಯಿತು. ನಗರಸಭೆ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯಿತು. ನಗರದ ಕಾಲೇಜು ವೃತ್ತ, ಮೆಕ್ಕೆ ವೃತ್ತ, ಬಸ್ ನಿಲ್ದಾಣ, ಕ್ಲಾಕ್ ಟವರ್ ಸೇರಿದಂತೆ ವಿವಿಧೆಡೆ ಅಳವಡಿಸಿದ್ದ ಪ್ಲೇಕ್ಸ್, ಬ್ಯಾನರ್ ಗಳನ್ನು ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ಮೂಲಕ ತೆಗೆದು ಹಾಕಲಾಯಿತು.