ಪಕ್ಷ ಹೇಳಿದರೆ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತೇನೆಂದ ಸುಮಲತಾ ಅಂಬರೀಶ್
ಇನ್ನೂ ಸುಮಲತಾ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಂಸದೆಯಾಗಿರುವ ನನನ್ನು ಶಾಸಕರು ಭೇಟಿಯಾಗುತ್ತಾರೆ. ಸಮಾರಂಭದಲ್ಲಿ ನಾವೆಲ್ಲ ಭೇಟಿಯಾಗುತ್ತೇವೆ. ಈ ರೀತಿಯ ವದಂತಿ ಚುನಾವಣೆ ಸಂದರ್ಭದಲ್ಲಿ ಇದು ಸಾಮಾನ್ಯ. ನನ್ನ ಚುನಾವಣೆ ವೇಳೆ ಸುಳ್ಳು ಮಾಹಿತಿ, ಸುಳ್ಳು ಪ್ರಚಾರ ಮಾಡಿದ್ದರು. ನಾನಂತೂ ಯಾರನ್ನು ಭೇಟಿ ಮಾಡಿಲ್ಲ. ಮಂಡ್ಯದಲ್ಲಿ ಒಳ್ಳೆ ರಿಸಲ್ಟ್ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.