ಎಂಎಲ್ಎ ಚುನಾವಣೆಗೆ ಸುಮಲತಾ ಸ್ಪರ್ಧೆ

ಮಂಗಳವಾರ, 31 ಜನವರಿ 2023 (12:15 IST)
ಮಂಡ್ಯ : ಸಂಸದೆ ಸುಮಲತಾ ಯಾವ ಪಕ್ಷ ಸೇರುತ್ತಾರೆ ಎಂಬ ಚರ್ಚೆಗಳು ಜೋರಾಗಿದೆ. ಈ ಹೊತ್ತಿನಲ್ಲಿಯೇ ಸಂಸದೆ ಸುಮಲತಾ ಬೆಂಬಲಿಗರು ಹಾಗೂ ಅಭಿಮಾನಿಗಳು ಮಹತ್ವದ ಸಭೆಯನ್ನ ಮಂಗಳವಾರ ಕರೆದಿದ್ದು, ಎಲ್ಲರ ಚಿತ್ತ ಆ ಸಭೆಯತ್ತ ನೆಟ್ಟಿದೆ.

ಸುಮಲತಾ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಬಿಜೆಪಿ, ರಾಜ್ಯ ರೈತ ಸಂಘ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ರು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಿಂದೆ ನಿಂತು ಸುಮಲತಾ ಗೆಲುವಿಗೆ ಕಾರಣರಾಗಿದ್ದರು.

ಸದ್ಯ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿ ಕೊಡ್ತಾರಾ ಎಂಬ ಚರ್ಚೆಯಾಗ್ತಿದೆ. 

ಆ ಚರ್ಚೆಗೆ ಪುಷ್ಠಿ ನೀಡುವಂತೆ ಸಂಸದೆ ಸುಮಲತಾ ಹೇಳಿಕೆಗಳನ್ನು ನೀಡುತ್ತಿದ್ದು, ಸಮಯ ಬಂದಾಗ ನಿರ್ಧಾರ ಮಾಡುತ್ತೇನೆ ಎನ್ನುತ್ತಿದ್ದಾರೆ. ಯಾವಾಗ ಸಂಸದೆ ಸುಮಲತಾ ಆ ಹೇಳಿಕೆ ಕೊಟ್ಟರು ಇದೀಗ ಅವರ ಬೆಂಬಲಿಗರು ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ