ಬೇಸಿಗೆ ಆರಂಭದಲ್ಲೇ ನೆತ್ತಿ ಸುಡುತ್ತಿದೆ ಬಿಸಿಲು..!
ಶಿವರಾತ್ರಿ ಬಂದರೆ ಶಿವ ಶಿವ ಎನ್ನುತ್ತಾ ಚಳಿ ದೂರವಾಗಿ ಬೇಸಿಕೆ ಆರಂಭವಾಗುತ್ತೆ ಅನ್ನೋದು ಪ್ರತೀತಿ. ಆದ್ರೆ, ಶಿವರಾತ್ರಿಗೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಗಾರ್ಡನ್ ಸಿಟಿಯಲ್ಲಿ ಬಿಸಿಲ ಆರ್ಭಟ ಜೋರಾಗಿದೆ. ಮನೆಯಿಂದ ಹೊರಗೆ ಕಾಲಿಡಲಾಗದಷ್ಟು ನೆತ್ತಿ ಸುಡುವ ಬಿಸಿಲಿನ ಅನುಭವವಾಗ್ತಿದ್ದು, ಸಿಲಿಕಾನ್ ಸಿಟಿ ಮಂದಿ ತಂಪುಪಾನೀಯಾದ ಮೊರೆ ಹೋಗ್ತಿದ್ದಾರೆ.ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಇದೀಗ ಬಿಸಿಲನ ಆರ್ಭಟ ಜೋರಾಗಿದೆ..ಸಿಟಿ ಮಂದಿ ಬೇಸಿಗೆ ಆರಂಭ ಮೊದಲು ಈ ರಣ ಬಿಸಿಲು ನೋಡಿ ದಂಗ್ ಆಗಿದ್ದು, ಮನೆಯಿಂದ ಹೊರಗೆ ಬರಲು ಹಿಂದೆ ಮುಂದೆ ನೋಡ್ತಿದ್ದಾರೆ. ಅಷ್ಟರ ಮಟ್ಟಿಗೆ ಸೂರ್ಯ ದೇವರು ಶಾಕ್ ನೀಡ್ತಿದ್ದಾನೆ. ಸಿಲಿಕಾನ್ ಸಿಟಿ ಯಲ್ಲಿ ಎಲ್ಲಿ ನೋಡಿದ್ರು ಕಣ್ಣೀಗೆ ಕಾಣೋದು ಎಳನೀರು... ಈ ಎಳನೀರಿನ ಮೊರೆ ಹೋಗ್ತಿದ್ದಾರೆ ಸಿಲಿಕಾನ್ ಮಂದಿ. ಇನ್ನು ಎಳನೀರು ದೇಹದ ಉಷ್ಣಾಂಶ ಕಡಿಮೆ ಮಾಡುತ್ತೆ, ದೇಹಕ್ಕೆ ಶಕ್ತಿ ನೀಡುತ್ತೆ ಹಾಗಾಗಿ ಬಹುತೇಕ ಮಂದಿ ಎಳನೀರನ್ನ ಸಖತ್ ಇಷ್ಟಪಟ್ಟು ಕುಡಿತ್ತಾರೆ. ಇನ್ನು, ರಸ್ತೆಯಲ್ಲಿ ಓಡಾಡಬೇಕಾದ್ರೆ ತುಂಬ ಸುಸ್ತಾಗುತ್ತೆ. ಆಗ ತಣ್ಣಾಗಿರೋದು ಕುಡಿಬೇಕು , ತಿನ್ನಬೇಕು ಅನ್ನಿಸುತ್ತೆ. ಹಾಗಂತ ರಸ್ತೆಬದಿಯಲ್ಲಿರೊದೇಲ್ಲಾ ಸಿಕ್ಕ ಸಿಕ್ಕದು ತನ್ನೋಕ್ಕೆ ಆಗಲ್ಲ. ಹಾಗಾಗಿ ನಾನು ಆರೋಗ್ಯಕ್ಕೆ ಹಿತಕರವಾದ ಎಳನೀರು ಸೇವನೆ ಮಾಡ್ತೀನಿ ಎಂದು ಸಾರ್ವಜನಿಕರು ಹೇಳಿದ್ರು.