ಜಗತ್ತಿನಲ್ಲಿ ಸಾಂಪ್ರದಾಯಿಕ ಔಷಧ ಯುಗ ಶುರು

ಮಂಗಳವಾರ, 26 ಏಪ್ರಿಲ್ 2022 (20:09 IST)
ಗುಜರಾತ್ನಲ್ಲಿ ಸ್ಥಾಪನೆ ಆಗಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರದಿಂದ (ಜಿಸಿಟಿಎಂ), ಜಾಗತಿಕ ಮಟ್ಟದಲ್ಲಿ ಸಾಂಪ್ರದಾಯಿಕ ಔಷಧದ ಯುಗ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
 
ರಾಜ್ಯದ ಜಾಮ್ನಗರದಲ್ಲಿ ಮಂಗಳವಾರ ಡಬ್ಲ್ಯುಎಚ್ಒ ಮುಖ್ಯಸ್ಥ ಡಾ ಟೆಡ್ರೋಸ್ ಘೆಬ್ರೇಯೇಸಸ್ ಹಾಗೂ ಮಾರಿಷಸ್ ಪ್ರಧಾನಿ ಪ್ರವಿಂದ ಜುಗನಾಥ್ ಅವರ ಜತೆಗೂಡಿ ಮೋದಿ ಅವರು ಜಾಗತಿಕ ಸಾಂಪ್ರದಾಯಕ ಔಷಧ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮಾತನಾಡಿದ ಪ್ರಧಾನಿ, ‘ಈ ಕೇಂದ್ರದಿಂದ ವಿಶ್ವದಲ್ಲಿ ಮುಂದಿನ 25 ವರ್ಷದ ಅವಧಿಯಲ್ಲಿ ಸಾಂಪ್ರದಾಯಿಕ ಔಷಧದ ಯುಗವೇ ಆರಂಭವಾಗಲಿದೆ.

ಇದರಿಂದ ಆಯುರ್ವೇದ, ಯುನಾನಿಯಂಥ ಸಾಂಪ್ರದಾಯಿಕ ಔಷಧಗಳಿಗೆ ಜಾಗತಿಕ ಬೇಡಿಕೆ ಲಭಿಸುತ್ತದೆ ಹಾಗೂ ಇಂಥ ಔಷಧೀಯ ಪದ್ಧತಿಗೆ ಭಾರೀ ನೆರವು ನೀಡುತ್ತದೆ’ ಎಂದರು. ಇದೇ ವೇಳೆ, 2023ನೇ ಇಸವಿಯನ್ನು ‘ವಿಶ್ವ ಸಿರಿಧಾನ್ಯ ವರ್ಷ’ ಎಂದು ಘೋಷಿಸಿದ ವಿಶ್ವಸಂಸ್ಥೆಗೆ ಅವರು ಕೃತಜ್ಞತೆ ಸಲ್ಲಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ