ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ತಮ್ಮನ ಹತ್ಯೆಗೆ ಸುಪಾರಿ ಕೊಟ್ರು!

ಸೋಮವಾರ, 8 ಆಗಸ್ಟ್ 2022 (13:38 IST)
ಕಲಬುರಗಿ : ರಕ್ಷಾ ಬಂಧನ ಇನ್ನೇನು ಹತ್ತಿರದಲ್ಲೇ ಇದೆ. ರಕ್ಷಾ ಬಂಧನ ಅಂದರೆ ಸಹೋದರ, ಸಹೋದರಿಯರ ಬಾಂಧವ್ಯವನ್ನು ಸಾರುವ ಹಬ್ಬ  ಇದು.
 
ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟಿ, ಶುಭವಾಗಲಿ ಅಂತ ಹಾರೈಸುತ್ತಾಳೆ. ರಾಖಿ ಕಟ್ಟಿಸಿಕೊಂಡ ಸಹೋದರ ನಿನ್ನ ರಕ್ಷಣೆ ಮಾಡುತ್ತೇನೆ ಅಂತ ವಾಗ್ದಾನ ಮಾಡುತ್ತಾನೆ.

ಆದರೆ ಕಲಬುರಗಿಯಲ್ಲಿ ಇಂತಹ ಪವಿತ್ರವಾದ ಅಕ್ಕ, ತಮ್ಮನ ಸಂಬಂಧಕ್ಕೆ ಮಹಿಳೆಯರಿಬ್ಬರು ಮಸಿ ಎರಚಿದ್ದಾರೆ. ತನ್ನ ತಮ್ಮನನ್ನೇ ಸುಪಾರಿ  ಕೊಟ್ಟು ಕೊಲ್ಲಿಸಿದ್ದಾರೆ. ವಿಚಾರ ತಿಳಿದು ಇಡೀ ಕಲಬುರಗಿಗೆ ಕಲಬುರಗಿಯೇ ಬೆಚ್ಚಿ ಬಿದ್ದಿದೆ.

 

ಕಳೆದ ತಿಂಗಳು ಜುಲೈ 29ರಂದು ಕಲಬುರಗಿ ನಗರದ ಹೊರವಲಯದ ಅಳಂದ ರಸ್ತೆಯ ಕೆರೆಭೋಸ್ಗಾ ಕ್ರಾಸ್ ಬಳಿಯ ಜಮೀನೊಂದರ ಬಳಿ ಯುವಕನೋರ್ವ ಶವ ಬಿದ್ದಿತ್ತು. ಆತನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು,  ನಂತರ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಆತನನ್ನು ಬರ್ಬರವಾಗಿ ಕೊಂದಿದ್ದ ಹಂತಕರು, ಆತ ಪ್ರಾಣ ಬಿಡುತ್ತಲೇ ಅಲ್ಲಿಂದ ಎಸ್ಕೇಪ್ ಆಗಿದ್ದರು.

ಈ ಬಗ್ಗೆ ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಅವಿನಾಶ್, ಆಸಿಫ್, ರೋಹಿತ್, ಮೋಸಿನ್ ಹಾಗೂ ಅನಿತಾ, ಮೀನಾಕ್ಷಿ ಎಂಬ ಇಬ್ಬರು ಮಹಿಳೆಯರು ಸೇರಿ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಅಷ್ಟಕ್ಕೂ ಕೊಲೆಯಾಗಿದ್ದ ವ್ಯಕ್ತಿಯನ್ನು ಗಾಜಿಪುರ ಬಡಾವಣೆಯ ನಿವಾಸಿ ನಾಗರಾಜ್ ಮಟಮಾರಿ ಅಂತ ಗುರುತಿಸಲಾಗಿದೆ. ಆತನನ್ನು ಹಂತಕರು ಕೆರೆಭೋಸ್ಗಾ ಕ್ರಾಸ್ ಬಳಿಯ ಜಮೀನೊಂದರ ಬಳಿ ಬರ್ಬರವಾಗಿ ಕೊಂದಿದ್ದರು.

ಹೌದು, ನಾಗರಾಜ್ ಮಟಮಾರಿ ಹತ್ಯೆಯ ಹಿಂದೆ ಆತನ ಅಕ್ಕಂದಿರಾದ ಅನಿತಾ ಹಾಗೂ ಮೀನಾಕ್ಷಿ ಎಂಬುವರ ಕೈವಾಡ ಇರುವುದಾಗಿ ಪೊಲೀಸರು ಪತ್ತೆ ಹಚ್ಚಿದ್ದಾರೆ.  ಈ ಇಬ್ಬರು ಸಹೋದರಿಯರು ತಮ್ಮನ ಹತ್ಯೆಗೆ 50 ಸಾವಿರ ರೂಪಾಯಿ ಹಣ ಕೊಟ್ಟಿದ್ದರು ಎನ್ನಲಾಗಿದೆ. ಇವರಿಂದ ಹಣ ಪಡೆದ ಸುಪಾರಿ ಕಿಲ್ಲರ್ ಗಳಾದ ಅವಿನಾಶ್, ಆಸಿಫ್, ರೋಹಿತ್, ಮೋಸಿನ್ ಸೇರಿದಂತೆ  ನಾಗರಾಜ್ನನ್ನು ಹತ್ಯೆ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ