ಡಾಬರ್ ಚವನ್ಪ್ರಾಶ್ಗೆ ಸೂಪರ್ಸ್ಟಾರ್ ಅಕ್ಕಿನೇನಿ ನಾಗಾರ್ಜುನ ನೂತನ ಬ್ರ್ಯಾಂಡ್ ಅಂಬಾಸಿಡರ್
ಗುರುವಾರ, 24 ಫೆಬ್ರವರಿ 2022 (19:25 IST)
ಬೆಂಗಳೂರು, ಭಾರತದ ಮುಂಚೂಣಿಯಲ್ಲಿರುವ ವಿಜ್ಞಾನ ಆಧಾರಿತ ಆಯುರ್ವೇದ ಪರಿಣತ ಸಂಸ್ಥೆಯಾಗಿರುವ ಡಾಬರ್ ಇಂಡಿಯಾ ಲಿಮಿಟೆಡ್ ಇಂದು ತನ್ನ ಡಾಬರ್ ಚವನ್ಪ್ರಾಶ್ಗೆ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ನೂತನ ಬ್ರ್ಯಾಂಡ್ ಅಂಬಾಸಿಡರ್ ಆಗಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ಮತ್ತು ಸಿನಿಮಾ ಐಕಾನ್ ನಾಗಾರ್ಜುನ ಅವರನ್ನು ನೇಮಕ ಮಾಡಿದೆ.
ದಕ್ಷಿಣ ಭಾರತೀಯ ಮಾರುಕಟ್ಟೆಗಳಿಗೆಂದೇ ಸಿದ್ಧಪಡಿಸಲಾಗಿರುವ ಹೊಸ ಜಾಹೀರಾತು ಅಭಿಯಾನದಲ್ಲಿ ನಟ ಅಕ್ಕಿನೇನಿ ನಾಗಾರ್ಜುನ ಅವರು ನಟಿಸಿದ್ದು, ಸದ್ಯದಲ್ಲಿಯೇ ಈ ಅಭಿಯಾನ ಚಿತ್ರವು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ. ಈ ಸಹಯೋಗದೊಂದಿಗೆ ಡಾಬರ್ ದಕ್ಷಿಣ ಭಾರತದ ಪ್ರತಿಯೊಂದು ಮನೆ ಮನಗಳನ್ನು ತಲುಪುವ ಉದ್ದೇಶವನ್ನು ಹೊಂದಿದೆ. ಅಲ್ಲದೇ, ಇದರ ಮೂಲಕ ಬಲವಾದ ರೋಗನಿರೋಧಕ ಶಕ್ತಿಯ ಪ್ರಾಮುಖ್ಯತೆ ಮತ್ತು ರೋಗಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಡಾಬರ್ ಚವನ್ಪ್ರಾಶ್ ನಿರ್ವಹಿಸುವ ಪ್ರಮುಖ ಪಾತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ.
ಡಾಬರ್ ಇಂಡಿಯಾ ಲಿಮಿಟೆಡ್ನ ದಕ್ಷಿಣ ವಲಯದ ಪ್ರಾದೇಶಿಕ ಬಿಸಿನೆಸ್ ಮುಖ್ಯಸ್ಥ ಜೆಪಿ ವಿಕ್ಟೋರಿಯಾ ಅವರು ಈ ಸಹಭಾಗಿತ್ವದ ಬಗ್ಗೆ ಮಾತನಾಡಿ, ``ದಕ್ಷಿಣ ಭಾರತೀಯ ಮಾರುಕಟ್ಟೆಗಳಿಗೆ ಡಾಬರ್ ಚವನ್ಪ್ರಾಶ್ಗೆ ನೂತನ ಬ್ರ್ಯಾಂಡ್ ಅಂಬಾಸಿಡರ್ ಅನ್ನಾಗಿ ಸೂಪರ್ಸ್ಟಾರ್ ನಾಗಾರ್ಜುನ ಅವರನ್ನು ಹೊಂದಲು ನಮಗೆ ಅತೀವ ಸಂತಸವೆನಿಸುತ್ತಿದೆ. ಜನೋಪಕಾರಿಯಾಗಿರುವ ಮತ್ತು ಎಚ್ಐವಿ/ಏಡ್ಸ್ ಜಾಗೃತಿ ಅಭಿಯಾನಗಳ ರಾಯಭಾರಿಯಾಗಿರುವ ನಾಗಾರ್ಜುನ ಅವರು ಅನೇಕ ಸಮುದಾಯ ಅಭಿವೃದ್ಧಿ ಉಪಕ್ರಮಗಳಿಗೆ ಸಾಕಷ್ಟು ಪ್ರಚಾರ ನೀಡುವ ತಾರೆಯಾಗಿದ್ದಾರೆ. ಅದೇ ರೀತಿ, ಅಶ್ವಗಂಧ, ಗಿಲೋಯ್ ಮತ್ತು ಆಮ್ಲ ಮುಂತಾದ 40 ಕ್ಕೂ ಹೆಚ್ಚು ಗಿಡಮೂಲಿಕೆಗಳ ಶಕ್ತಿಯನ್ನು ಹೊಂದಿರುವ ಡಾಬರ್ ಚವನ್ಪ್ರಾಶ್ ಯಾವಾಗಲೂ ಅನಾರೋಗ್ಯದ ವಿರುದ್ಧ ಹೋರಾಟ ನಡೆಸಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ. ಡಾಬರ್ ಚವನ್ಪ್ರಾಶ್ ಯಾವಾಗಲೂ ದೇಶದ ಆರೋಗ್ಯವನ್ನು ನಿರ್ಮಾಣ ಮಾಡುವ ಕಾರಣವನ್ನು ಹೊಂದಿರುತ್ತದೆ ಮತ್ತು ಈ ವಲಯದಲ್ಲಿ ಚಾಂಪಿಯನ್ ಆಗಿದೆ. ಈ ದಿಸೆಯಲ್ಲಿ ಸೂಪರ್ಸ್ಟಾರ್ ನಾಗಾರ್ಜುನ ಅವರನ್ನು ಡಾಬರ್ ಕುಟುಂಬಕ್ಕೆ ಸ್ವಾಗತಿಸಲು ನಾವು ಸಂತೋಷಪಡುತ್ತೇವೆ ಎಂದು ತಿಳಿಸಿದರು.
ಈ ಸಹಯೋಗದ ಬಗ್ಗೆ ಮಾತನಾಡಿದ ನಾಗಾರ್ಜುನ ಅವರು, ``ಡಾಬರ್ ಕುಟುಂಬದೊಂದಿಗೆ ಸಹಯೋಗ ಹೊಂದುತ್ತಿರುವುದಕ್ಕೆ ನನಗೆ ಸಂತಸವೆನಿಸುತ್ತಿದೆ ಮತ್ತು ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಡಾಬರ್ ಚವನ್ಪ್ರಾಶ್ ಅನ್ನು ಬಳಸುವಂತೆ ಮಾಡಲು ಪ್ರೇರಣೆ ದೊರೆಯುತ್ತದೆ ಎಂಬ ವಿಶ್ವಾಸ ನನಗಿದೆ. ಹಿಂದೆಂದಿಗಿಂತಲೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದಕ್ಕೆ ಹೆಚ್ಚು ಆದ್ಯತೆ ನೀಡುವ ಪರಿಸ್ಥಿತಿಯಲ್ಲಿ ನಾವಿಂದು ಬದುಕುತ್ತಿದ್ದೇವೆ. ಬಲಯುತವಾದ ರೋಗನಿರೋಧಕ ಶಕ್ತಿಯ ಅಗತ್ಯತೆ ಇಂದಿದೆ. ಡಾಬರ್ ಅಧಿಕೃತ ಆಯುರ್ವೇದದ ವಿಜ್ಞಾನದ ಮೂಲಕ ದೇಶದ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಪಟ್ಟುಬಿಡದೇ ಪೋಷಿಸುತ್ತಾ ಬರುತ್ತಿದೆ. ಒಬ್ಬ ಗ್ರಾಹಕನಾಗಿ ನಾನು ಡಾಬರ್ನೊಂದಿಗೆ ಹಲವಾರು ವರ್ಷಗಳಿಂದ ಸಂಬಂಧವನ್ನು ಹೊಂದಿದ್ದೇನೆ. ಡಾಬರ್ ಮತ್ತು ನಾನು ಒಟ್ಟಾಗಿ ದಕ್ಷಿಣ ಭಾರತದ ಪ್ರತಿ ಮನೆಗೆ ಡಾಬರ್ ಚವನ್ಪ್ರಾಶ್ ಅನ್ನು ಕೊಂಡೊಯ್ಯುತ್ತೇವೆ ಮತ್ತು ದೇಶದ ಪ್ರತಿರಕ್ಷೆಯನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತೇವೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ ಎಂದು ಹೇಳಿದರು.
ಈ ಅಭಿಯಾನವು ದಕ್ಷಿಣ ಭಾರತದ ಸಮರ ಕಲೆಯ ಸಿಲಂಬಂ ಅನ್ನು ರೂಪಕವಾಗಿ ಬಳಸುತ್ತದೆ. ಇದು ಅನಾರೋಗ್ಯದ ವಿರುದ್ಧ ಹೋರಾಟಲು ಪ್ರತಿರಕ್ಷೆಯನ್ನು ನಿರ್ಮಾಣ ಮಾಡುವ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.
ಈ ಬಗ್ಗೆ ಮಾತನಾಡಿದ ಮ್ಯಾಕನ್ ವಲ್ರ್ಡ್ ಗ್ರೂಪ್ ಕ್ರಿಯೇಟಿವ್ ಹೆಡ್-ದಕ್ಷಿಣ ಸಂಬಿತ್ ಮೊಹಾಂತಿ ಅವರು, ``ಸೃಜನಾತ್ಮಕವಾದ ಕಥೆ ಹೇಳುವಿಕೆಯು ಉತ್ಪನ್ನದ ಪ್ರತಿಪಾದನೆಯನ್ನು ಜನರು ಗಮನಕ್ಕೆ ತೆಗೆದುಕೊಳ್ಳಲು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ಡಾಬರ್ ಚವನ್ಪ್ರಾಶ್ ಅನ್ನು ಪರಿಚಯಿಸುವ ಕಾರ್ಯವನ್ನು ನಾವು ವಹಿಸಿಕೊಂಡಾಗ ಪ್ರಾಚೀನ ದಕ್ಷಿಣದ ಸಮರ ಕಲೆಯಾದ `ಸಿಲಂಬಂ ಅಥವಾ ಕೋಲು ಕಾದಾಟವನ್ನು ಥೀಮ್ ಆಗಿ ಬಳಸುವ ಕಲ್ಪನೆಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಇದರಲ್ಲಿ ಆಶ್ಚರ್ಯವೇನಿಲ್ಲ. ನಮ್ಮ ಚಿತ್ರವು ರೋಮಾಂಚನಾಕಾರಿ, ಆಕ್ಷನ್ ಹೊಂದಿದ ಕಥೆಯಾಗಿದ್ದು, ಡಾಬರ್ ಚವನ್ಪ್ರಾಶ್ ನಿಮ್ಮ ಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ರೋಗಗಳ ವಿರುದ್ಧ ಹೋರಾಡಲು ಹೇಗೆ ನಿರ್ಮಾಣ ಮಾಡುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು.
ಅಕ್ಕಿನೇನಿ ನಾಗಾರ್ಜುನ ಅವರು ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದ ಅತ್ಯಂತ ಪ್ರತಿಭಾನ್ವಿತ ನಟರಾಗಿದ್ದಾರೆ. ಕಳೆದ ಮೂರು ದಶಕಗಳಿಗೂ ಅಧಿಕ ಸಮಯದಿಂದ ಅವರು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಬೆಳ್ಳಿತೆರೆಯಲ್ಲಿ ಅನೇಕ ಅವಿಸ್ಮರಣೀಯ ಸಾಧನೆ ಮಾಡಿರುವ ಅವರು ತಮ್ಮ ಸಮಾಜ ಸೇವೆಯನ್ನು ನಡೆಸುವ ಮೂಲಕ ಸಹ ನಟರು, ಯುವ ನಟರು ಮತ್ತು ಪ್ರೇಕ್ಷಕರಿಗೆ ಪ್ರೇರಕ ಶಕ್ತಿಯಾಗಿದ್ದಾರೆ.
``ನಾವು ಅತ್ಯುತ್ಕøಷ್ಠವಾದ ಅಭಿಯಾನದಲ್ಲಿ ಕೆಲಸ ಮಾಡಿದ್ದೇವೆ. ಡಾಬರ್ ಚವನ್ಪ್ರಾಶ್ನ ಮುಖವಾಗಿ ನಾಗಾರ್ಜುನ ಜೊತೆಗೆ ಈ ಅಭಿಯಾನವು ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿನ ಗ್ರಾಹಕರೊಂದಿಗೆ ಉತ್ತಮ ವ್ಯಾಪ್ತಿಯನ್ನು ಮತ್ತು ಸಂಪರ್ಕ ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಂವಹನದೊಂದಿಗೆ ನಾವು `ಭಾರತದಲ್ಲಿ ತಯಾರಿಸಿದ, ಭಾರತೀಯರಿಂದ, ಭಾರತೀಯರಿಗಾಗಿ ಎಂಬ ಪರಿಕಲ್ಪನೆಯ ಮೂಲಕ ನಮ್ಮ ಬಲವಾದ ಹೆಮ್ಮೆಯ ಪ್ರಜ್ಞೆಯನ್ನು ಸ್ಥಾಪಿಸಿದ್ದೇವೆ. ಇದಲ್ಲದೇ ಭಾರತದಲ್ಲಿ ಪ್ರತಿ ಮನೆಯ ರೋಗನಿರೋಧಕ ಶಕ್ತಿ ಮತ್ತು ಯೋಗಕ್ಷೇಮಕ್ಕಾಗಿ ಕಾಳಜಿ ವಹಿಸುತ್ತಿದ್ದೇವೆ ಎಂದು ವಿಕ್ಟೋರಿಯಾ ತಿಳಿಸಿದರು.