ತೆರಿಗೆ ಶಾಕ್‌ಗೆ ಬೆಚ್ಚಿದ ವ್ಯಾಪಾರಿಗಳು, ಜುಲೈ 25ರಂದು ಅಂಗಡಿ, ಮುಂಗಟ್ಟು ಬಂದ್‌ಗೆ ನಿರ್ಧಾರ

Sampriya

ಸೋಮವಾರ, 21 ಜುಲೈ 2025 (15:39 IST)
P
ಬೆಂಗಳೂರು:ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ತೆರಿಗೆ ನೋಟಿಸ್‌ಗಳಿಂದ ಕಂಗಲಾಗಿರುವ ಸಣ್ಣ ವ್ಯಾಪಾರಿಗಳು ಇದೀಗ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. 

ಇದೀಗ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸರ್ಕಾರಕ್ಕೆ ಒಗ್ಗಟ್ಟು ತೋರಿಸಲು, ಸರ್ಕಾರವನ್ನು ಪ್ರಶ್ನಿಸಲು ನಿರ್ಧಸಲು ಅಂಗಡಿ ವ್ಯಾಪಾರಿಗಳು ಒಂದಾಗಿದ್ದಾರೆ. ಜುಲೈ 23ರಿಂದ ಜುಲೈ 25ರವರೆಗೆ ಹಂತ ಹಂತವಾಗಿ ಅಂಗಡಿ ಬಂದ್ ಮಾಡಲಾಗುತ್ತದೆ ಎಂದು ವರ್ತಕರು ತಿಳಿಸಿದ್ದಾರೆ. 

ಹೀಗಾಗಿ ಕಾರ್ಮಿಕ ಪರಿಷತ್ ಸದ್ಯ ಪ್ರತಿ ಅಂಗಡಿಗೂ ತೆರಳಿ ಕರಪತ್ರ ನೀಡುತ್ತಿದೆ. ಬಂದ್‌ಗೆ ಬಂಬಲಿಸಿ ಎಂದು ಮನವಿಯನ್ನು ಮಾಡುತ್ತಿದೆ.    ಇನ್ನೂ 25ರಂದು ನಡೆಯುವ ಪ್ರತಿಭಟನೆಯಲ್ಲಿ ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಟೀ ಶಾಪ್, ಸಣ್ಣಪುಟ್ಟ ವ್ಯಾಪಾರಿಗಳು, ಕುಟುಂಬದವರು ಭಾಗಿಯಾಗಲಿದ್ದಾರೆ.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ