ಅನ್ ಲಾಕ್ ಬಳಿಕ ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಿ
ಕೆಲವು ದಿನಗಳ ಮಟ್ಟಿಗೆ ಆನ್ ಲೈನ್ ಖರೀದಿ ಬಿಟ್ಟು, ಸಣ್ಣ ವ್ಯಾಪಾರಿಗಳು, ಬೀದಿ ಬದಿ ತರಕಾರಿ ಮಾರುವವರಿಂದ ಖರೀದಿ ಮಾಡಿದರೆ ಅವರ ಸ್ಥಿತಿಗತಿಯೂ ಸುಧಾರಿಸುತ್ತದೆ. ಕೊರೋನಾ ಬಳಿಕ ನಮ್ಮ ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದೆ. ಇಂತಹ ಸಂದರ್ಭದಲ್ಲಿ ನಿಜವಾಗಿಯೂ ದೇಶಕಟ್ಟಲು ಕೈ ಜೋಡಿಸಬೇಕೆಂದರೆ ಇಂತಹ ಸಣ್ಣ ಮಟ್ಟಿನ ನೆರವು ನೀಡಿದರೂ ಸಾಕು.