ವಾಣಿಜ್ಯ ಚಟುವಟಿಕೆಗಳಿಲ್ಲದೇ ಸರ್ಕಾರದ ಬೊಕ್ಕಸಕ್ಕೂ ಕುತ್ತು

ಗುರುವಾರ, 10 ಜೂನ್ 2021 (10:25 IST)
ಬೆಂಗಳೂರು: ಲಾಕ್ ಡೌನ್ ತೆರವು ಮಾಡುವ ಹೊಸ್ತಿಲಲ್ಲಿರುವ ರಾಜ್ಯ ಸರ್ಕಾರ ವಾಣಿಜ್ಯ ಚಟವಟಿಕೆಗಳಿಗೆ ಅವಕಾಶ ಕೊಡುವ ಮೂಲಕ ಆದಾಯ ವೃದ್ಧಿಯ ದಾರಿ ನೋಡಿಕೊಳ್ಳಬಹುದು.


ಸರ್ಕಾರ ಒಂದೇ ಬಾರಿಗೆ ಅನ್ ಲಾಕ್ ಮಾಡುವ ಬದಲು, ಹಂತ ಹಂತವಾಗಿ ಅನ್ ಲಾಕ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದೆ. ಹೀಗಾಗಿ ಆದ್ಯತೆಯ ಮೇರೆಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ಈಗಾಗಲೇ ಲಾಕ್ ಡೌನ್ ನಿಂದಾಗಿ ಸರ್ಕಾರದ ಆದಾಯಕ್ಕೂ ಪೆಟ್ಟು ಬಿದ್ದಿದೆ.

ಮುಂದಿನ ಹಂತದಲ್ಲಿ ಸಂಚಾರ ವ್ಯವಸ್ಥೆ, ಸಭೆ ಸಮಾರಂಭಗಳಿಗೆ ಅವಕಾಶ ನೀಡಬಹುದು. ಇದರ ಬಗ್ಗೆ ಇಂದು ಆದೇಶ ಹೊರಬೀಳಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ