ಮುಡಾ ಹಗರಣದಲ್ಲಿ ಸಿಎಂ ಪತ್ನಿಗೆ ರಿಲೀಫ್: ಇಡಿಗೆ ಸುಪ್ರೀಂಕೋರ್ಟ್ ಛೀಮಾರಿ
ಸಿಎಂ ಮತ್ತು ಪತ್ನಿ ವಿಚಾರಣೆಗೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಆರ್. ಗವಾಯಿ ಇಡಿಗೆ ಛೀಮಾರಿ ಹಾಕಿದೆ. ರಾಜಕೀಯ ಮತದಾರರ ಮುಂದೆ ಇರಲಿ. ಇದಕ್ಕೆ ನಿಮ್ಮನ್ನು ಯಾಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಇಡಿಯನ್ನು ತರಾಟೆಗೆ ತೆಗೆದುಕೊಂಡಿದೆ.