ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ?

ಗುರುವಾರ, 24 ನವೆಂಬರ್ 2022 (12:39 IST)
ತುಮಕೂರು : ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾ ಜಿದ್ದಿ ತಾರಕಕ್ಕೇರಿದೆ. ಹಾಲಿ ಮತ್ತು ಮಾಜಿ ಶಾಸಕರುಗಳ ಆರೋಪ-ಪ್ರತ್ಯಾರೋಪಗಳು ಮಿತಿ ಮೀರಿದೆ.

ಮಾಜಿ ಶಾಸಕ ಸುರೇಶ್ ಗೌಡರ ಕೊಲೆಗೆ ಹಾಲಿ ಜೆಡಿಎಸ್ ಶಾಸಕ ಗೌರಿಶಂಕರ್ ಸುಪಾರಿ ಕೊಟ್ಟಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟುಮಾಡಿದೆ.

ತುಮಕೂರು ಜಿಲ್ಲೆಯಲ್ಲೇ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ರಾಜಕೀಯ ಸೆಡ್ಡು, ಜಿದ್ದಾಜಿದ್ದಿಗೆ ಕುಖ್ಯಾತಿ. ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡರು ತನ್ನದ್ದು ಶೇರು ಎಂದರೆ ಹಾಲಿ ಶಾಸಕ ಗೌರಿಶಂಕರ್ ತಾನೇನು ಕಡಿಮೆ ಇಲ್ಲ ತನ್ನದು ಸವಾಶೇರು ಎನ್ನುತ್ತಾರೆ.

ಅಷ್ಟರ ಮಟ್ಟಿಗೆ ಪರಸ್ಪರ ರೋಶಾವೇಷ ಇದೆ. ಆದರೆ ಇದ್ದಕಿದ್ದ ಹಾಗೇ ಸುರೇಶ್ ಗೌಡರು ವೇದಿಕೆಯೊಂದರಲ್ಲಿ ಮಾತನಾಡುತ್ತಾ, ನನ್ನ ಕೊಲೆಗೆ ಗೌರಿಶಂಕರ್ ಸುಪಾರಿ ಕೊಟ್ಟಿದ್ದಾರೆ ಎಂದು ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ