ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದ್ದು, ಕಳೆದ 24 ಗಂಟೆಯಲ್ಲಿ 34,113 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಸೋಂಕಿನಿಂದಾಗಿ 346 ಮಂದಿ ಸಾವನ್ನಪ್ಪಿದ್ದಾರೆ. ಇಂದು 91,930 ಮಂದಿ ಗುಣಮುಖರಾಗಿರೋದಾಗಿ ತಿಳಿಸಿದೆ.
ಕೋವಿಡ್ ಪಾಸಿಟಿವಿಟಿ ದರ ಶೇ.3.19ಕ್ಕೆ ಇಳಿಕೆಯಾಗಿದೆ. ಈಗ ದೇಶದಲ್ಲಿ 4,78,882 ಸಕ್ರೀಯ ಸೋಂಕಿತರಿದ್ದಾರೆ. ಇದುವರೆದೆ 4,16,77,641 ಮಂದಿ ಗುಣಮುಖರಾಗಿದ್ದಾರೆ. 5,09,011 ಜನರು ಸಾವನ್ನಪ್ಪಿರೋದಾಗಿ ತಿಳಿಸಿದೆ.