ಈಡಿಗ ಸಮಾಜವನ್ನ ಎಸ್ ಟಿ ಮೀಸಲಾತಿಗೆ ಸೇರಿಸಬೇಕೆಂದು ಸ್ವಾಮೀಜಿ ಪ್ರಣವಾನಂದ ಶ್ರೀ ಒತ್ತಾಯ

ಗುರುವಾರ, 23 ಫೆಬ್ರವರಿ 2023 (15:03 IST)
ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವಾಗಿ ಈಡಿಗ ಸಮಾಜದ ಸ್ವಾಮೀಜಿ ಪ್ರಣವಾನಂದ ಶ್ರೀ ಪ್ರತಿಕ್ರಿಯಿಸಿದ್ದಾರೆ.
 
ನಾವು 70 ಲಕ್ಷ ಜನ ಇದ್ದೀವಿ.ಆಡಳಿತ ಪಕ್ಷದಲ್ಲಿ ಏಳು ಶಾಸಕರು, ಇಬ್ಬರು ಸಚಿವರು ಇದ್ದಾರೆ.ಈಗಾಗಲೇ ಬ್ರಹ್ಮಶ್ರೀ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದಾರೆ.ಈ ಒಂದು ಪ್ರಯತ್ನಕ್ಕೆ ಶತ ಪ್ರಯತ್ನಕ್ಕೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಏಕೈಕ ಮಂತ್ರಿ ಇರುವಂತವರು.ಉಳಿದವರು ಯಾವುದೇ ಕಾರ್ಯರೂಪಕ್ಕೆ ಬರುವಂತ ಕೆಲಸ ಮಾಡಿಲ್ಲ.ಅವರಿಗೆ ಬರುವಂತಹ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತೆ.ಅದಕ್ಕೆ ಸಿಎಂ ಬೊಮ್ಮಾಯಿ, ಕೋಟಾ ಶ್ರೀನಿವಾಸ್ ಅವರಿಗೆ ಅಭಿನಂದನೆ ಸಲ್ಲಿಸಿದ್ದೇವೆ.ಕೋಟಾ ಶ್ರೀನಿವಾಸ್ ಪರ ಇಡಿ ಈಡಿಗ,ಬಿಲ್ಲವ ಸಮಾಜ ಇದೆ ಅಂತ ಹೇಳ್ತೀನಿ.ಇವತ್ತು ಉಳಿದ ಬೇಡಿಕೆ ಇದ್ದಾವೆ.ನಮ್ಮ ಕುಲ ಕಸುಬು ಸೇಂದಿ ಇಳಿಸಿ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ರು
 
ಅಲ್ಲದೇ ಈಡಿಗೆ ಸಮಾಜವನ್ನು ಎಸ್ ಟಿ ಮೀಸಲಾತಿಗೆ ಸೇರಿಸಬೇಕು.ಯಾಕೆಂದರೆ ನಾವು ಕಾಡಿನ ಜೊತೆ ಬದುಕುತ್ತಿದ್ದೇವೆ.ಅದಕ್ಕೆ ಎಸ್ ಟಿ ಮೀಸಲಾತಿ ನೀಡಿ ಸಮುದಾಯಕ್ಕೆ ನ್ಯಾಯ ಕೊಡಿಸಬೇಕು.ವಿಧಾನಸೌಧದ ಎದುರು ಕಡೆ ಬ್ರಹ್ಮ ಶ್ರೀ ನಾರಾಯಣ ಗುರುಗಳ 60 ಅಡಿ ಪುತ್ಥಳಿ ನಿರ್ಮಾಣ ಮಾಡಬೇಕು.ಸಿಂಗದೂರು ಚೌಡೇಶ್ವರಿ ದೇವಸ್ಥಾನದ ಮೇಲೆ ಆಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕು.ಈಗೆ ಹತ್ತು ಹಲವು ಬೇಡಿಕೆಗಳನ್ನು ಸಿಎಂ ಮುಂದೆ ಇಟ್ಟಿದ್ದೇವೆ ಎಂದು ಸ್ವಾಮೀಜಿ ಪ್ರಣವಾನಂದ ಶ್ರೀ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ