ಕುಡಿದು ಬಸ್ನಲ್ಲಿ ಯುವತಿಯ ಸೀಟ್ ಮೇಲೆ ಮೂತ್ರವಿಸರ್ಜನೆ !
ವಿಜಯಪುರದಿಂದ ಮಂಗಳೂರಿನ ಕಡೆ ಹೊರಟಿದ್ದ ಬಸ್ನಲ್ಲಿ 32 ವರ್ಷದ ಕುಡುಕ ಪ್ರಯಾಣಿಕನೊಬ್ಬ ಅನಾಗರಿಕ ಪ್ರದರ್ಶನ ತೋರಿದ್ದಾನೆ. ಕೆಎಸ್ಆರ್ಟಿಸಿಯ ಹವಾನಿಯಂತ್ರಿತವಲ್ಲದ ಸ್ಲೀಪರ್ ಬಸ್ ಅನ್ನು ಪ್ರಯಾಣದ ವೇಳೆ ನಡುವೆ ಹುಬ್ಬಳ್ಳಿ ಬಳಿಯ ಕಿರೆಸೂರು ಡಾಬಾ ಬಳಿ ಊಟಕ್ಕೆಂದು ನಿಲ್ಲಿಸಲಾಗಿತ್ತು.
ಎಲ್ಲಾ ಪ್ರಯಾಣಿಕರು ಬಸ್ನಿಂದ ಇಳಿದು ಊಟಕ್ಕೆ ಹೋಗಿದ್ದರು. ಆದರೆ ಅದೇ ಬಸ್ನಲ್ಲಿದ್ದ ಕುಡುಕ ಪ್ರಯಾಣಿಕ ಬಸ್ನಿಂದ ಇಳಿಯಲಾರದೇ 3ನೇ ಸೀಟ್ ಮೇಲೆ ಕುಳಿತು ಮೂತ್ರ ವಿಸರ್ಜನೆ ಮಾಡಿದ್ದಾನೆ.