ಆಟೋ ಚಾಲಕರಿಗೆ ಸಿಹಿ ಸುದ್ದಿ

ಶನಿವಾರ, 23 ಮೇ 2020 (13:01 IST)
ಲಾಕ್ ಡೌನ್‍ನಿಂದ ಸಂಕಷ್ಟದಲ್ಲಿರುವ ಸುಮಾರು 5000 ಆಟೋ ಚಾಲಕರಿಗೆ ಆಹಾರಧಾನ್ಯಗಳ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.

ಕಲಬುರಗಿ ನಗರದ ಸುಮಾರು 5000 ಆಟೋ ಚಾಲಕರಿಗೆ ಜಿಲ್ಲಾಡಳಿತದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಆಹಾರಧಾನ್ಯಗಳ ಕಿಟ್‍ಗಳನ್ನು ಶಾಸಕರು ವಿತರಣೆ ಮಾಡಿದರು.

ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಟೋ ಚಾಲಕರಿಗೆ ನಗರದ ರೋಟರಿ ಕ್ಲಬ್ ಶಾಲೆ ಅವರಣದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ಅವರು ಆಹಾರಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದರು.

ಇನ್ನೂ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಟೋ ಚಾಲಕರಿಗೆ ರಿಂಗ್ ರಸ್ತೆಯ ಕೆ.ಸಿ.ಟಿ. ಕಾಲೇಜು ಅವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಸಕಿ ಕನೀಸ್ ಫಾತೀಮಾ ಅವರು ಆಟೋ ಚಾಲಕರಿಗೆ ಆಹಾರಧಾನ್ಯಗಳ ಕಿಟ್ ವಿತರಿಸಿದರು.

 500 ರೂ.ಗಳ ಮೊತ್ತದ ಈ ಕಿಟ್‍ನಲ್ಲಿ 3 ಕೆ.ಜಿ.ಅಕ್ಕಿ, 1 ಕೆ.ಜಿ. ತೊಗರಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಮತ್ತು ಉಪ್ಪು ತಲಾ 1.ಕೆ.ಜಿ., ಅರಶಿನ, ಸಾಬೂನು ಒಳಗೊಂಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ