ದೇವಾಲಯದ ಅರ್ಚಕರು, ಸಿಬ್ಬಂದಿಗೆ ಆಹಾರ ಕಿಟ್

ಶುಕ್ರವಾರ, 1 ಮೇ 2020 (17:02 IST)
ಸಾಂಕ್ರಾಮಿಕವಾಗಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಲಾಕ್‍ಡೌನ್ ಜಾರಿಗೊಳಿಸಿದ್ದು, ಎಲ್ಲ ದೇವಾಲಯಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ‘ಸಿ’ ವರ್ಗದ ದೇವಸ್ಥಾನಗಳ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣೆಗೆ ಚಿತ್ರದುರ್ಗ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ನಿರ್ದೇಶನದಂತೆ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ “ಎ” ವರ್ಗದ ದೇವಾಲಯಗಳ ವತಿಯಿಂದ  ಜಿಲ್ಲೆಯಲ್ಲಿನ “ಸಿ” ವರ್ಗದ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ಇತರೆ ಸಿಬ್ಬಂದಿಗಳಿಗಾಗಿ ಆಹಾರದ ಕಿಟ್‍ಗಳನ್ನು ಪೂರೈಸಲು ಸಂಬಂಧಪಟ್ಟ ತಾಲ್ಲೂಕು ಆಡಳಿತಕ್ಕೆ  ಒಪ್ಪಿಸಲಾಯಿತು.

ಚಿತ್ರದುರ್ಗ ತಾಲ್ಲೂಕಿಗೆ-115, ಚಳ್ಳಕೆರೆ-40, ಹಿರಿಯೂರು-51, ಮೊಳಕಾಲ್ಮೂರು-29, ಹೊಳಲ್ಕೆರೆ-52 ಹಾಗೂ ಹೊಸದುರ್ಗ  ತಾಲ್ಲೂಕಿಗೆ-142 ಸೇರಿದಂತೆ ಪಡಿತರವಿರುವ ಒಟ್ಟು 429 ಆಹಾರದ ಕಿಟ್‍ಗಳನ್ನು ವಿತರಿಸಲಾಗಿದೆ.

ಪ್ರತಿ ಆಹಾರ ಕಿಟ್ 5 ಕೆಜಿ. ಅಕ್ಕಿ, 2 ಕೆಜಿ. ತೊಗರಿ ಬೆಳೆ, 1 ಕೆಜಿ. ಬೆಲ್ಲ, 1 ಲೀ. ಅಡುಗೆ ಎಣ್ಣೆ, 1 ಕೆಜಿ. ಸಕ್ಕರೆ ಹಾಗೂ 1 ಕೆಜಿ. ಉಪ್ಪು ಒಳಗೊಂಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ