ಅನರ್ಹ ಶಾಸಕರ ಸಭೆಯಲ್ಲಿ ಹೀಗೆ ಆಗೋದಾ

ಶುಕ್ರವಾರ, 13 ಸೆಪ್ಟಂಬರ್ 2019 (14:43 IST)
ಅನರ್ಹಗೊಂಡಿರೋ ಶಾಸಕರು ಮಹತ್ವದ ಸಭೆ ನಡೆಸಿದ್ದಾರೆ.

ಅನರ್ಹಗೊಂಡಿರೋ ಶಾಸಕರು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಅನರ್ಹತೆ ಪ್ರಕರಣದ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಕ್ಷೇತ್ರದ ಬಗ್ಗೆ ಹಾಗೂ ಅನರ್ಹಗೊಂಡಿರೋ ಕುರಿತು ಸಲ್ಲಿಸಿರೋ ಅರ್ಜಿ ವಿಚಾರಣೆ ಬಗ್ಗೆ ಗಂಭೀರ ಚಿಂತನೆ ನಡೆಸಿದ್ರು.

ಸಭೆ ಬಳಿಕ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದು, ಕೋಲಾರದಲ್ಲಿ ಕಾಂಗ್ರೆಸ್ ಸೋಲಲು ಕೆಲಸ ಮಾಡಿರೋ ರಮೇಶ್ ಕುಮಾರ್ ರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಬೇಕು ಅಂತ ಒತ್ತಾಯಿಸಿದ್ರು.

ಇನ್ನು, ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸೈಡ್ ನಲ್ಲಿದ್ದಾರೆ. ಈಗ ಅವರು ನನ್ನ ಎದೆಯಲ್ಲಿ ಇಲ್ಲ ಅಂತ ಟಾಂಗ್ ನೀಡಿದ್ರು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ