ಗಂಡನಿಂದ ಕಸಿದು ಹೆಂಡತಿಗೆ ನೀಡುವುದೇ ಸಿದ್ದು ಗ್ಯಾರಂಟಿ: ಸಿ ಟಿ ರವಿ ವ್ಯಂಗ್ಯ
ಕ್ವಾಟರ್ ಮದ್ಯದ ಬೆಲೆ 50 ಏರಿಕೆ ಮಾಡಿ, ಅದೇ ಹಣವನ್ನು ಮಹಿಳೆಯರಿಗೆ ನೀಡುತ್ತಿದ್ದಾರೆ. ಪಹಣಿ ದರ ಏರಿಕೆ, ವಿದ್ಯುತ್ ಸಂರ್ಪಕ, ಬಸ್ ದರ ಹೀಗೆ ಎಲ್ಲವನ್ನೂ ಏರಿಕೆ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಗಂಡನಿಂದ ಕಿತ್ತು ಹೆಂಡತಿಗೆ ನೀಡುವುದೇ ಸಿದ್ಧರಾಮಯ್ಯ ಅವರ ಗ್ಯಾರಂಟಿ ಯೋಜನೆ ಎಂದು ವ್ಯಂಗ್ಯ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಭಾರತ ಮಾತಾಕಿ ಜೈ ಎನ್ನಲು ಶಾಸಕ ಲಕ್ಷ್ಮಣ ಸವದಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮತಿ ಬೇಕು. ಅದೇ ಪಾಕಿಸ್ತಾನ ಜಿಂದಾಬಾದ್ ಎನ್ನಲು ಇವರಿಗೆ ಯಾರ ಪರವಾನಿಗೆ ಬೇಕಿಲ್ಲ. ಪಂಚಾಯತ್‍ನಿಂದ ಪಾರ್ಲಿಮೆಂಟ್ ವರೆಗೆ ಅವರು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ ಎಂದು ಗುಡುಗಿದರು.