ತಮ್ಮ ಧಾರ್ಮಿಕ ನಂಬಿಕೆಗೆ ಘಾಸಿಯಾದರೆ ತಾಲಿಬಾಲಿನಿಗಳು ತಲ್ವಾರ್ ಎತ್ತುತ್ತಾರೆ: ಸಿಟಿ ರವಿ

Sampriya

ಬುಧವಾರ, 29 ಜನವರಿ 2025 (19:14 IST)
ಮೈಸೂರು: ಗಂಗಾ ನದಿಯಲ್ಲಿ ಮುಳುಗಿದರೆ ಬಡತನ ಹೋಗುತ್ತದೆಯೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಸಿಟಿ ರವಿ ಅವರು ಹಿಂದೂಗಳ ನಂಬಿಕೆಗಳಿಗೆ ಘಾಸಿ ಮಾಡುವುದೇ ಕಾಂಗ್ರೆಸ್‌ ಉದ್ದೇಶ ಎಂದು ಕಿಡಿಕಾರಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಏಕೆಂದರೆ, ನಾವು ತಾಲಿಬಾನಿಗಳ ರೀತಿ ಅವರಿಗೆ ತಿರುಗೇಟು ಕೊಡುವುದಿಲ್ಲ. ತಾಲಿಬಾಲಿನಿಗಳು ತಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದ್ದಲ್ಲಿ ಅವರು ತಲ್ವಾರ್ ಎತ್ತುತ್ತಾರೆ.

ಆದರೆ ನಾವು ಹಿಂದೂಗಳು ದುಷ್ಟರನ್ನು ಕಂಡರೆ ದೂರವಿರಿ ಎಂಬಂತೆ ಇದ್ದು ಬಿಡುತ್ತೇವೆ. ಹೀಗಾಗಿ ಕಾಂಗ್ರೆಸ್‌ನವರು ಪದೇ ಪದೇ ನಮ್ಮ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲು ಈ ರೀತಿ ಇರಲಿಲ್ಲ. ಹೀಗಿದ್ದಿದ್ದರೆ ಹಲವು ಬಾರಿ ಗೆಲ್ಲಲಾಗುತ್ತಿರಲಿಲ್ಲ. ಈಗ ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ಅವರ ಬಾಯಿಯಿಂದ ಹೇಳಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಅದನ್ನು ಸಮರ್ಥಿಸಿದ್ದಾರೆ’ ಎಂದು ಟೀಕಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ