ಸಚಿವೆ ನೀಡಿದ ದೂರಿಗೆ ಎಫ್‌ಐಆರ್‌ ಆಗುತ್ತದೆ, ಆದರೆ ನಾನು ನೀಡಿದ ದೂರಿಗೆ ಇನ್ನೂ ಎಫ್‌ಐಆರ್ ಆಗಿಲ್ಲ: ಸಿಟಿ ರವಿ

Sampriya

ಬುಧವಾರ, 1 ಜನವರಿ 2025 (19:46 IST)
Photo Courtesy X
ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ನಡೆದ ದೌರ್ಜನ್ಯ ಮತ್ತು ಹತ್ಯೆ ಯತ್ನದ ಬಗ್ಗೆ 2024ರ ಡಿಸೆಂಬರ್ 19ರಂದು ನಾನು ಸಲ್ಲಿಸಿದ್ದ ದೂರಿನ ಮೇಲೆ ಇನ್ನೂ ಬೆಳಗಾವಿ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಬಿಜೆಪಿ ಎಂಎಲ್‌ಸಿ ಸಿಟಿ ರವಿ ಹೇಳಿದರು.

ಈ ಬಗ್ಗೆ ಬೆಂಗಳೂರಿನ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 19 ರಂದು ರಾತ್ರಿ ನಾನು ದೂರು ನೀಡಿದ್ದೇನೆ ಮತ್ತು ಈ ಕ್ಷಣದವರೆಗೆ ಎಫ್ಐಆರ್ ದಾಖಲಿಸಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಬದಲಾಗಿದೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಮುಖಂಡರಿಗೆ ಒಂದು ಕಾನೂನು ಮತ್ತು ಕಾಂಗ್ರೆಸ್ಸೇತರ ಪಕ್ಷಗಳ ಮುಖಂಡರಿಗೆ ಮತ್ತೊಂದು ಕಾನೂನು ಇದೆ ಎಂದು ಅಸಮಾಧಾನ ಹೊರಹಾಕಿದರು.

ಆದರೆ ಸಚಿವೆ ನನ್ನ ವಿರುದ್ಧ ನೀಡಿದ ದೂರು ಬೇಗನೇ ಸ್ವೀಕೃತವಾಗಿ, ಎಫ್‌ಐಆರ್‌ ದಾಖಲಾಗುತ್ತದೆ. ಆದರೆ ನಾನು ಪೊಲೀಸ್ ದೌರ್ಜನ್ಯದ ಬಗ್ಗೆ ಡಿಸೆಂಬರ್ 19ರಂದು ದೂರು ನೀಡಿದ್ದರೂ, ಸಿಒಡಿ ಅಧಿಕಾರಿ ಮತ್ತು ಡಿಜಿಪಿ-ಐಜಿ ಇಬ್ಬರೂ ತಮ್ಮ ಗಮನಕ್ಕೆ ಬಂದಿಲ್ಲವೆನ್ನುತ್ತಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ