ಸಾವರ್ಕರ್ ಬಗ್ಗೆ ಮಾತನಾಡೋದು ರಾಜಕೀಯ ಪ್ರೇರಿತ
ಸಾವರ್ಕರ್ ಕುರಿತು ಕೆಲವರು ಪೂಜ್ಯ ಭಾವನೆ ಹೊಂದಿದ್ದಾರೆ. ಇನ್ನೂ ಕೆಲವರು ಅಪಮಾನ ಆಗುವ ರೀತಿಯಲ್ಲಿ ಮಾತಾಡ್ತಾರೆ.ಅದು ರಾಜಕೀಯ ಪ್ರೇರಿತ ಹೇಳಿಕೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.ಸಾವರ್ಕರ್ ಕುರಿತು ಸತ್ಯಾಸತ್ಯತೆ ತಿಳಿಸಲು ಶ್ರೀಗಂಧ ಸಂಸ್ಥೆ, ಸಾಮಗಾನ ಸಂಸ್ಥೆ ಆಶ್ರಯದಲ್ಲಿ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.1944ರಲ್ಲಿ ವೀರ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ಮಾಡಿದ್ದ ಪುಣ್ಯ ಸ್ಮರಣೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಕಾರ್ಯಕ್ರಮಕ್ಕೆ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಆಗಮಿಸಲಿದ್ದಾರೆ.ಕಾರ್ಯಕ್ರಮದ ಕುರಿತು ರಾಷ್ಟ್ರವಾದಿ ಚಿಂತಕಿ ಲಕ್ಷ್ಮೀ ರಾಜಕುಮಾರ ಪ್ರಧಾನ ಭಾಷಣ ಮಾಡಲಿದ್ದಾರೆ.