ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ಕೊಡಿ
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಫೈಟ್ ಮುಗಿಯುತ್ತಲೇ ಇಲ್ಲ. ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ವಿವಾದ ಭುಗಿಲೇಳುತ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಲವು ಸಂಘಟನೆಗಳು ಪಟ್ಟು ಹಿಡಿದಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ಹೀಗಾಗಿ ಧ್ವಜಾರೋಹಣ,ಗಣೇಶೋತ್ಸವ ಮುಗಿದರೂ ಮೈದಾನದ ಗಲಾಟೆ ಇನ್ನೂ ತಣ್ಣಗಾಗಿಲ್ಲ. ಗಣೇಶೋತ್ಸವಕ್ಕೆ ಅನುಮತಿ ಸಿಗದೆ ನಿರಾಸೆ ಗೊಂಡಿರೋ ಹಿಂದೂಪರ ಸಂಘಟನೆಗಳು ಇದೀಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಬಿಗಿಪಟ್ಟು ಹಿಡಿದಿದ್ದಾರೆ. ಮೈದಾನದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸಲು ಹಿಂದೂ ಪರ ಸಂಘಟನೆಗಳು ಸಿದ್ದತೆ ನಡೆಸಿವೆ. ಈ ಬಗ್ಗೆ ಸರ್ಕಾರದ ಕದ ತಟ್ಟಿರೋ ಚಾಮರಾಜಪೇಟೆ ನಾಗರೀಕ ನಾಗರಿಕರ ಒಕ್ಕೂಟ ಅನುಮತಿ ಕೋರಿ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಸಾಧ್ಯತೆ ಕೂಡಾ ಇದೆ. ಸರ್ಕಾರ ಅನುಮತಿ ನೀಡಿದ್ರೆ ಕನ್ನಡ ರಾಜ್ಯೋತ್ಸವ ನಾಡಹಬ್ಬದ ರೀತಿ ಆಚರಣೆ ಮಾಡೋಕೆ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಸಿದ್ದತೆ ನಡೆಸಿದೆ.