ಫ್ಲವರ್ ಶೋಗೆ ಸಜ್ಜುಗೊಳ್ಳುತ್ತಿದೆ ಸಸ್ಯಕಾಶಿ-ಲಾಲ್ ಬಾಗ್

geetha

ಗುರುವಾರ, 4 ಜನವರಿ 2024 (20:00 IST)
ಗಣರಾಜ್ಯೋತ್ಸವದ ಅಂಗವಾಗಿ ಪ್ಲವರ್ ಶೋ ಜನವರಿ 18 ರಿಂದ 28ರವರೆಗೆ ಫ್ಲವರ್ ಶೋ ನಡೆಯಲಿದೆ.ತೋಟಗಾರಿಕೆ ಇಲಾಖೆ
 215 ನೇ ಫ್ಲವರ್ ಶೋ ಆಯೋಜನೆ ಮಾಡಿದೆ.ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸೋ ನಿರೀಕ್ಷೆ ಇದೆ.

12 ನೇ ಶತಮಾನದ ಸಮಾನತಾವಾದಿ ಬಸವಣ್ಣರ ವಿಚಾರ ಹಾಗೂ ವಚನಸಾಹಿ ತೀಮ್ ನೊಂದಿಗೆ ಈ ಬಾರಿಯ ಫ್ಲವರ್ ಶೋ ನಡೆಯಲಿದೆ.ಅನುಭವ ಮಂಟಪ,ಐಕ್ಯ ಮಂಟಪ,12 ನೇ ಶತಮಾನದ ಶರಣರಾದ ಬಸವಣ್ಣ,ಅಲ್ಲಮ್ಮ ಪ್ರಭು,ಅಂಬಿಗರ ಚೌಡಯ್ಯ ಸೇರಿದಂತೆ ಪ್ರಮುಖರ ಮೂರ್ತಿಗಳನ್ನು ಹೂ ಗಳ ಮೂಲಕ ಅರಳಲಿವೆ.ಈ ಬಾರಿ ಸುಮಾರು 8 ಲಕ್ಷ ಹೂಗಳನ್ನು ಫ್ಲವರ್ ಶೋಗೆ ಬಳಸಲಾಗುತ್ತವೆ.ಫಲಪುಷ್ಪ ಪ್ರದರ್ಶನಕ್ಕೆ ಸುಮಾರು10-12  ಲಕ್ಷಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ