ತಾಂಡಾ: ಬಾಡೂಟ ಸೇವಿಸಿದವರಲ್ಲಿ ವಾಂತಿಭೇಧಿ, ಇದೇ ಕಾರಣವೆಂದ ಅಧಿಕಾರಿಗಳು

Sampriya

ಗುರುವಾರ, 10 ಅಕ್ಟೋಬರ್ 2024 (12:08 IST)
Photo Courtesy X
ಲಿಂಗಸುಗೂರು: ತಾಂಡಾದಲ್ಲಿ ದೇವರ ಹೆಸರಲ್ಲಿ ಸಿದ್ಧಪಡಿಸಿದ ಬಾಡೂಟ ಸೇವನೆ ಮಾಡಿದ ತಾಲ್ಲೂಕಿನ ಗದ್ಲರತಾಂಡಾ ನಿವಾಸಿಗಳಲ್ಲಿ 20ಕ್ಕೂ ಅಧಿಕ ಮಂದಿ ವಾಂತಿ ಭೇಧಿಯಿಂದ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಇನ್ನೂ ವಾಂತಿಭೇದಿಗೆ ಕಲುಷಿತ ಆಹಾರ ಸೇವನೆಯೇ ಕಾರಣ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ, ಡಾ. ವಿಕ್ರಮ ಪಾಟೀಲ, ಡಾ. ಅಭಿಜಿತ್ ನಾಯಕ ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ಪರಿಶೀಲಿಸಿದರು. ತಾಂಡಾದಲ್ಲಿ ದೇವರ ಹೆಸರಲ್ಲಿ ಬುಧವಾರ ಬಾಡೂಟ ಸಿದ್ಧಪಡಿಸಲಾಗಿತ್ತು. ಇದನ್ನು ಸೇವಿಸಿದ್ದ 20 ಮಂದಿ ವಾಂತಿಭೇಧಿಯಿಂದ ಬಳಲಿದ್ದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಪಾಟೀಲ ಮಾಕಾಪುರ ಮಾತನಾಡಿ, 'ತಾಂಡಾಕ್ಕೆ ವೈದ್ಕಕೀಯ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದೆ. ಕಲಷಿತ ಆಹಾರ ಸೇವನೆಯಿಂದಾಗಿ ವಾಂತಿ ಕಾಣಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆಹಾರ ಮಾದರಿ ಪಡೆದು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿದೆ’ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ