ಕಾರನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿದ್ದವರು ಅಂದರ್!

ಶನಿವಾರ, 4 ಆಗಸ್ಟ್ 2018 (16:29 IST)
ಬೈಕ್ ಗೆ ಅಪಘಾತವಾಗಿದೆ ಎಂದು ಹೇಳುತ್ತಾ ಕಾರಿನಲ್ಲಿದ್ದ ವೃದ್ಧರನ್ನು, ದಂಪತಿಯನ್ನ ಹೆದರಿಸಿ ಚಿನ್ನಾಭರಣ ಸುಲಿಗೆ ಮಾಡುತ್ತಿದ್ದ ಕುಖ್ಯಾತ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರನ್ನು ಬೈಕ್ ಮೇಲೆ ಹಿಂಬಾಲಿಸಿ ಅಪಘಾತವಾಗಿದೆ ಎಂದು ಬೆದರಿಸಿ ಕಾರ್ ನಲ್ಲಿದ್ದವರ ಚಿನ್ನಾಭರಣ ದೋಚುತ್ತಿದ್ದ ಕಳ್ಳರನ್ನು ಬಂಧಿಸಲಾಗಿದೆ. ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬಂಧಿತ ಆರೋಪಿಗಳಿಂದ 45 ಲಕ್ಷ ರೂ. ಮೌಲ್ಯದ 1 ಕೆ.ಜಿ. 88 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಗಂಗಾನಗರದ ಆಸೀಪ್ ಖಾನ್ ಅಲಿಯಾಸ್ ಪಿಸ್ತೂಲ್, ಮಹಿಬೂಬ ಪಾಷಾ, ಮುನಿರಾಮಣ್ಣ ಬ್ಲಾಕ್ ನ ಅಲ್ತಾಫ್ ಮೊಹಮದ್ ಸೋಹೆಲ್ ಬಂಧಿತ ಆರೋಪಿಗಳಾಗಿದ್ದಾರೆ. ಕಾರಿಗೆ ಬೈಕ್ ಡಿಕ್ಕಿ ಹೊಡೆದು ಆ ಬಳಿಕ ಕಾರಿನಲ್ಲಿದ್ದವರನ್ನು ಬೆದರಿಸಿ ಚಿನ್ನಾಭರಣ, ನಗದನ್ನು ಈ ತಂಡವು ದರೋಡೆ ಮಾಡುತ್ತಿತ್ತು. ಈಗ ಪೊಲೀಸರ ಅತಿಥಿಯಾಗಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ