ನೇಪಾಳ ಮೂಲದ ಅಂತರಾಜ್ಯ ಕಳ್ಳರ ಬಂಧನ

ಬುಧವಾರ, 1 ಆಗಸ್ಟ್ 2018 (20:42 IST)
ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನೇಪಾಳ ಮೂಲದ‌ ನಾಲ್ವರು ಅಂತರರಾಜ್ಯ ಕಳ್ಳರನ್ನ ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕೆರೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನೇಪಾಳ ಮೂಲದ‌ ನಾಲ್ವರು ಅಂತರರಾಜ್ಯ ಕಳ್ಳರನ್ನ ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಟಕುರ್ಕಿ ಬಳಿ ರಸ್ತೆಗೆ ಅಡ್ಡಲಾಗಿ ಕಲ್ಲು ಇಟ್ಟು ದರೋಡೆಗೆ ಯತ್ನಿಸಿದ್ದ ವೇಳೆ ಕಳ್ಳರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಬಂಧಿತರು ದೀಲು ಆವೋಜಿ, ರಾವ್ ಬಹದ್ದೂರ್ ಕಾಮಿ, ಬರೀಸಿಂಗ್ ಡೋಲಿ, ಕಿರಣ ಆವೋಜಿ ಎಂದು ಗುರುತಿಸಲಾಗಿದೆ. ಜುಲೈ 15 ರಂದು ಕೆರೂರು ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ದರೋಡೆಗೆ  ಯತ್ನಿಸಿದ್ದರು. ಆದ್ರೆ ಕೈಗೆ ಏನೂ ಸಿಗದೆ ಕಳ್ಳತನದ ಕೆಲಸ ಸಕ್ಸಸ್ ಆಗಿರಲಿಲ್ಲ.

ಸದ್ಯ ವಿಚಾರಣೆ ವೇಳೆ ಡಿಸಿಸಿ ಬ್ಯಾಂಕ್  ಕಳ್ಳತನ ಯತ್ನದ ಬಗ್ಗೆ ಬಾಯಿಬಿಟ್ಟಿದ್ದಾರೆ. ಮಹಾರಾಷ್ಟ್ರ, ಮತ್ತು ಬೆಳಗಾವಿಯಲ್ಲಿ ಸಹ ಕಳ್ಳತನ ಮಾಡಿರೋದಾಗಿ ಬಾಯಿಬಿಟ್ಟಿದ್ದಾರೆ. ಇನ್ನು ಇವರಲ್ಲಿ ಐವರ ತಂಡ ಇದ್ದು ಓರ್ವ ಪರಾರಿಯಾಗಿದ್ದಾನೆ. ‌ಎಲ್ಲರೂ ನೇಪಾಳದ ನಿವಾಸಿಗಳಾಗಿದ್ದು ಮುಂಬೈನಲ್ಲಿ ವಾಸವಾಗಿದ್ದಾರೆ. ಈ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಿಸಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ