22 ಕೋಟಿ ತೆರಿಗೆ ಬಾಕಿಯಿದ್ರು ಕೇರ್ ಮಾಡದ ಮಂತ್ರಿ ಮಾಲ್‌ಗೆ ಈ ಹಿಂದೆ ಒಮ್ಮೆ ಬೀಗ ಜಡಿಯಲಾಗಿತ್ತು. ಅದಾದ ಬಳಿಕ ಎಚ್ಚೆತ್ತುಕೊಂಡ ಮಂತ್ರಿ ಮಾಲ್ 5 ಕೋಟಿ ತೆರಿಗೆ ಸರ್ಕಾರಕ್ಕೆ ಸಂದಾಯ ಮಾಡಿತು. ಅಮೇಲೆ ಬಿಬಿಎಂಪಿ, ಪೂರ್ಣ ತೆರಿಗೆ ಸಂದಾಯಕ್ಕೆ ಮಂತ್ರಿಮಾಲ್‌ಗೆ ಸಮಾಯವಕಾಶವೂ ನೀಡಿತ್ತು. ಆದ್ರೆ, ಮತ್ತೆ ಮಂತ್ರಿ ಮಾಲ್ ತೆರಿಗೆ ಕಟ್ಟಲು ಹಿಂದೇಟು ಹಾಕಿದೆ. ಹಾಗಾಗಿ ಇಂದು ಮಾಲ್‌ಗೆ ಮತ್ತೆ ಬೀಗ ಜಡಿದಿದೆ.